ಕರ್ನಾಟಕ

karnataka

ETV Bharat / state

ಸಚಿವರ ಮುಂದೆ ರೈತರ ಆಕ್ರೋಶ: ಕೃಷಿ ಭೂಮಿ ಮರಳಿಸುವಂತೆ ಮನವಿ - undefined

ಕಂದಾಯ ಸಚಿವ ಆರ್.ವಿ.ದೇಶಪಾಂಡೆ ನರೇಗಾ ಯೋಜನೆ ಕಾರ್ಯದ ಬಗ್ಗೆ ಸಭೆ ನಡೆಸಲು ಇಂದು ಬೆಳಗಾವಿ ನಗರಕ್ಕೆ ಆಗಮಿಸಿದ್ರು. ಈ ವೇಳೆ ರೈತರು ತಮ್ಮ ಕೃಷಿ ಭೂಮಿಯನ್ನು ವಾಪಾಸ್​ ನೀಡಿ ಕಾಮಗಾರಿಯನ್ನು ನಿಲ್ಲಿಸುವಂತೆ ಮನವಿ ಮಾಡಿದರು.

ಸಚಿವ ಆರ್.ವಿ. ದೇಶಪಾಂಡೆ

By

Published : May 18, 2019, 5:23 PM IST

ಬೆಳಗಾವಿ: ನಗರದ ಹಲಗಾ ಗ್ರಾಮದಿಂದ ಬೈಪಾಸ್ ರಸ್ತೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಇದಕ್ಕಾಗಿ ರೈತರ ಕೃಷಿ ಭೂಮಿಯನ್ನು ವಶಪಡಿಕೊಳ್ಳಲಾಗಿದೆ. ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು, ಇಂದು ಕಂದಾಯ ಸಚಿವರಿಗೆ ಮನವಿ ಮಾಡಿದರು.

ನರೇಗಾ ಯೋಜನೆ ಕಾರ್ಯದ ಬಗ್ಗೆ ಬೆಳಗಾವಿಗೆ ಆಗಮಿಸಿದ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಜೊತೆ ಮಾತನಾಡಿದ ರೈತರು, ಬೈಪಾಸ್ ರಸ್ತೆ ಕಾಮಗಾರಿಯಲ್ಲಿ ರೈತರು ಕೃಷಿ ಭೂಮಿ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ದಯಮಾಡಿ ರೈತರ ಭೂಮಿಯನ್ನು ವಾಪಸ್ ನೀಡಿ ಕಾಮಗಾರಿಯನ್ನು ನಿಲ್ಲಿಸುವಂತೆ ಮನವಿ ಮಾಡಿದರು.

ಸಚಿವ ಆರ್.ವಿ.ದೇಶಪಾಂಡೆ

ಪೊಲೀಸರ ವಿರುದ್ಧ ರೈತರ ಆಕ್ರೋಶ
ಕೃಷಿ ಭೂಮಿ ವಶಪಡಿಸಿಕೊಳ್ಳದಂತೆ ಹೋರಾಟ ಮಾಡುತ್ತಿರುವಾಗ ರೈತರ ಮೇಲೆ ಪೊಲೀಸರು ಹಲ್ಲೆ ಮಾಡುತ್ತಿದ್ದಾರೆ. ಇದರಿಂದ ಮಹಿಳೆಯರು ಮನೆ ಬಿಟ್ಟು ಹೊರಗೆ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ದಯಮಾಡಿ ನಮಗೆ ನ್ಯಾಯ ನೀಡಿ ಎಂದು ಸಚಿವರಲ್ಲಿ ಬೇಡಿಕೊಂಡರು.

ಆಕ್ರೋಶಗೊಂಡ ರೈತರಿಂದ ರಸ್ತೆ ತಡೆ
ಒಂದು ಕಡೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂದಾಯ ಸಚಿವರು ಸಭೆ ನಡೆಸುತ್ತಿದ್ದರೆ, ಮತ್ತೊಂದು ಕಡೆ ರೈತರ ಬೃಹತ್ ಪ್ರತಿಭಟನೆ ಕೂಡ ನಡೆಯಿತು. ರೈತರು ಬಿಸಿಲನ್ನು ಲೆಕ್ಕಿಸದೆ ಜಿಲ್ಲಾಧಿಕಾರಿ ಕಚೇರಿ ಮುಂದೆ ರಸ್ತೆ ತಡೆ ನಡೆಸಿ ಆಕ್ರೋಶ ಹೊರ ಹಾಕಿದರು.

ಅತ್ತು ದುಃಖ ಹೊರ ಹಾಕಿದ ಪುಟಾಣಿ
ಪೊಲೀಸರ ದೌರ್ಜನ್ಯಕ್ಕೆ ಒಳಗಾಗಿ ರೈತರ ಮೇಲಿನ ಹಲ್ಲೆ ಖಂಡಿಸಿದ ಪುಟಾಣಿ ಹುಡುಗಿ, ತಮಗೆ ಆಗುತ್ತಿರುವ ನೋವನ್ನು ಕಣ್ಣೀರಿನ ಮೂಲಕ ಹೊರ ಹಾಕಿದಳು. ಊಟ ಮಾಡಲು ಕುಳಿತ ನಮ್ಮ ತಂದೆಯನ್ನು ಪೊಲೀಸರು ಹೊರಗೆ ಎಳೆದು ತಂದರು. ಅಮ್ಮನನ್ನು ಪೊಲೀಸರು ಹೊಡೆದರು ಎಂದು ಮಗು ಕಣ್ಣೀರು ಹಾಕಿತು.

For All Latest Updates

TAGGED:

ABOUT THE AUTHOR

...view details