ಚಿಕ್ಕೋಡಿ :ಗದ್ದೆ ಕೆಲಸಕ್ಕಾಗಿ ಸಾಲ ಮಾಡಿ ತೀರಿಸಲಾಗದೆ ಮನನೊಂದು ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಳವಿ ಗ್ರಾಮದಲ್ಲಿ ನಡೆದಿದೆ.
ಸಾಲ ತೀರಿಸಲು ದಾರಿ ಕಾಣದೆ ನೇಣಿಗೆ ಶರಣಾದ ರೈತ - ಮಹಾಲಕ್ಷ್ಮೀ ಕೋ.ಆಫ್. ಸೊಸೈಟಿ
ಗದ್ದೆ ಕೆಲಸಕ್ಕಾಗಿ ಸಾಲ ಮಾಡಿ ತೀರಿಸಲಾಗದೆ ಮನನೊಂದು ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಳವಿ ಗ್ರಾಮದಲ್ಲಿ ನಡೆದಿದೆ.
ಕೆಂಪಣ್ಣ ನಾಯಕ (65) ಮೃತ ರೈತ, ದನಗಳಿಗೆ ಮೇವು ತರುತ್ತೇನೆಂದು ಹೇಳಿ ಹೋದವನು ಮರಳಿ ಬಂದಿರಲಿಲ್ಲ. ಪಕ್ಕದ ಗದ್ದೆಯ ಮಾಲೀಕ ಮಾರುತಿ ನಾಯಕ ಎಂಬುವವರು ಕೆಂಪಣ್ಣ ಗದ್ದೆಯಲ್ಲಿ ಗಿಡಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ವಿಷಯವನ್ನು ಕುಟುಂಬಸ್ಥರಿಗೆ ತಿಳಿಸಿದ್ದಾರೆ.
ಕೆಂಪಣ್ಣ ತನ್ನ ಗದ್ದೆಯಲ್ಲಿ ಬೋರ್ ಹಾಗೂ ಬಾವಿ ತೆಗೆಯಲು ಬೆಳವಿ ಗ್ರಾಮದ ಪಿಕೆಪಿಎಸ್ ಸೊಸೈಟಿಯಲ್ಲಿ ಒಂದು ಲಕ್ಷ, ಮಹಾಲಕ್ಷ್ಮೀ ಕೋ.ಆಫ್. ಸೊಸೈಟಿಯಲ್ಲಿ ಎರಡು ಲಕ್ಷ ಹಾಗೂ ಇತರರ ಬಳಿ ಒಂದು ಲಕ್ಷ ಹೀಗೆ ಒಟ್ಟು ನಾಲ್ಕು ಲಕ್ಷ ರೂಪಾಯಿಗಳನ್ನು ಸಾಲ ಮಾಡಿದ್ದಾರೆ. ಕೆಂಪಣ್ಣಾ ತಾನು ಮಾಡಿದ ಸಾಲವನ್ನು ಹೇಗೆ ತೀರಿಸುವುದೆಂದು ತಿಳಿಯದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮಗ ಗೋಪಾಲ ನಾಯಕ ಪೋಲಿಸರಿಗೆ ತಿಳಿಸಿದ್ದಾನೆ. ಈ ಕುರಿತು ಹುಕ್ಕೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.