ಬೆಳಗಾವಿ:ನೆರೆ ಪರಿಹಾರ ವಿಳಂಬವಾದ ಕಾರಣ ಸಂತ್ರಸ್ತ ನೇಕಾರನೊಬ್ಬ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ರಾಮದುರ್ಗ ತಾಲೂಕಿನ ಹಲಗತ್ತಿ ಗ್ರಾಮದಲ್ಲಿ ನಡೆದಿದೆ.
ನೆರೆ ಪರಿಹಾರ ವಿಳಂಬ: ಮನನೊಂದು ಸಂತ್ರಸ್ತ ನೇಕಾರ ಆತ್ಮಹತ್ಯೆ - ಬೆಳಗಾವಿ ಸುದ್ದಿ
ನೆರೆ ಪರಿಹಾರ ವಿಳಂಬವಾದ ಕಾರಣ ಸಂತ್ರಸ್ತ ನೇಕಾರನೊಬ್ಬ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹಲಗತ್ತಿ ಗ್ರಾಮದಲ್ಲಿ ನಡೆದಿದೆ.
ನೆರೆ ಪರಿಹಾರ ನೀಡಲು ವಿಳಂಬ : ಸಂತ್ರಸ್ತ ನೇಕಾರ ಮನನೊಂದು ಆತ್ಮಹತ್ಯೆ
ರಮೇಶ ಹವಳಕೋಡ (38) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಮೇಶನ ಮನೆ ಹಾಗೂ ಬಟ್ಟೆ ನೇಯುವ ವಿದ್ಯುತ್ ಮಗ್ಗ ನೆರೆಯಿಂದ ಸಂಪೂರ್ಣ ಹಾಳಾಗಿದ್ದವು ಎನ್ನಲಾಗಿದೆ.
ಇದರಿಂದ ಮನನೊಂದ ಸಂತ್ರಸ್ತ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.