ಬೆಳಗಾವಿ:ಸಾಲ ಮರುಪಾವತಿ ಮಾಡುವಂತೆ ಬ್ಯಾಂಕ್ ನೋಟಿಸ್ ನೀಡಿದ ಹಿನ್ನೆಲೆ ಮನನೊಂದ ರೈತ ವಿಷಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮಾಡಮಗೇರಿ ಗ್ರಾಮದಲ್ಲಿ ನಡೆದಿದೆ.
ಬ್ಯಾಂಕ್ ನೋಟಿಸ್ ನೀಡಿದ್ರಿಂದ ಮನನೊಂದ ರೈತ ವಿಷಸೇವಿಸಿ ಆತ್ಮಹತ್ಯೆಗೆ ಶರಣು.. - ಬ್ಯಾಂಕ್ ನೋಟಿಸ್ ಹಿನ್ನೆಲೆ ರೈತ ಆತ್ಮಹತ್ಯೆ
ಟ್ಯಾಕ್ಟರ್ ಖರೀದಿಗೆ ಅಲಹಾಬಾದ್ ಬ್ಯಾಂಕ್‌ನಲ್ಲಿ ಸಾಲ ಪಡೆದಿದ್ದ ರೈತ ಯಲ್ಲಪ್ಪಗೆ ಸಾಲ ಮರುಪಾವತಿಸುವಂತೆ ಕಳೆದ ತಿಂಗಳ ಹಿಂದಷ್ಟೇ ಅಲಹಾಬಾದ್ ಬ್ಯಾಂಕ್ ನೋಟಿಸ್ ನೀಡಿತ್ತು. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬ್ಯಾಂಕ್ ನೋಟಿಸ್ ನೀಡಿದ ಹಿನ್ನೆಲೆ ಮನನೊಂದ ರೈತ ವಿಷಸೇವಿಸಿ ಆತ್ಮಹತ್ಯೆಗೆ ಶರಣು
ಯಲ್ಪಪ್ಪ ನಾಯ್ಕರ್ (56) ಆತ್ಮಹತ್ಯೆಗೆ ಶರಣಾದ ರೈತ. ನಿನ್ನೆ ಸಂಜೆ ತಮ್ಮ ಮನೆಯಲ್ಲೇ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರೈತ ಯಲ್ಲಪ್ಪ ಟ್ರ್ಯಾಕ್ಟರ್ ಖರೀದಿಗೆ ಅಲಹಾಬಾದ್ ಬ್ಯಾಂಕ್‌ನಲ್ಲಿ ಸಾಲ ಪಡೆದಿದ್ದರು. ಸಾಲ ಮರುಪಾವತಿಸುವಂತೆ ಕಳೆದ ತಿಂಗಳ ಹಿಂದಷ್ಟೇ ಅಲಹಾಬಾದ್ ಬ್ಯಾಂಕ್ ರೈತನಿಗೆ ನೋಟಿಸ್ ನೀಡಿತ್ತು. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಜಿಲ್ಲೆಯ ಯರಗಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.