ಬೆಳಗಾವಿ: ತೋಟದ ಮನೆಗೆ ಬೆಂಕಿ ಬಿದ್ದು ಜಾನುವಾರು ಸಹಿತ ಅಪಾರ ಪ್ರಮಾಣದ ವಸ್ತುಗಳು ಸುಟ್ಟು ಭಸ್ಮವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಅವರೊಳ್ಳಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.
ಅವರೊಳ್ಳಿ ಗ್ರಾಮದ ನವರತ್ನ ಜೋಳದ ಎಂಬುವರಿಗೆ ಸೇರಿದ ತೋಟದ ಮನೆಗೆ ಆಕಸ್ಮಿಕ ಬೆಂಕಿ ತಗುಲಿದೆ. ಈ ವೇಳೆ, ಜೀವವನ್ನು ಲೆಕ್ಕಿಸದೇ ಬೆಂಕಿಯಲ್ಲಿ ನುಗ್ಗಿದ ರೈತ, ಜಾನುವಾರು ಹಾಗೂ ಇತರ ಅಗತ್ಯ ವಸ್ತುಗಳನ್ನು ರಕ್ಷಿಸಿದ್ದಾರೆ. ಆದರೂ ಘಟನೆಯಲ್ಲಿ 1 ಕರು ಬೆಂಕಿಗಾಹುತಿಯಾಗಿದ್ದು, 2 ಎಮ್ಮೆ ಹಾಗೂ 1 ಹಸುವಿಗೆ ಗಂಭೀರ ಗಾಯವಾಗಿದೆ. ತೋಟದ ಮನೆಯಲ್ಲಿದ್ದ ಕೃಷಿ ಸಾಮಗ್ರಿಗಳೆಲ್ಲವೂ ಸುಟ್ಟು ಭಸ್ಮವಾಗಿವೆ. 80 ಸಾವಿರಕ್ಕೂ ಹೆಚ್ಚು ಹಾನಿ ಆಗಿರವ ಬಗ್ಗೆ ಅಂದಾಜಿಸಲಾಗಿದೆ.