ಚಿಕ್ಕೋಡಿ :ಲಾಕ್ಡೌನ್ ಹಿನ್ನೆಲೆ 4 ಎಕರೆ ಜಮೀನಿನಲ್ಲಿ ಬೆಳೆದ ಟೊಮ್ಯಾಟೊ ಬೆಳೆಗೆ ಬೇಡಿಕೆ ಸಿಗದೆ ಕೆನಾಲ್ಗೆ ಸುರಿದು ರೈತರು ನಾಶ ಮಾಡಿದ್ದಾರೆ.
120 ಟನ್‌ನಷ್ಟು ಟೊಮ್ಯಾಟೊ ಕಾಲುವೆಗೆ ಸುರಿದ ರೈತ.. ಬೆಲೆ ಇರದಿದ್ರೇ,ಇನ್ನೇನ್ ಮಾಡ್ತಾನ್ರೀ.. - ಚಿಕ್ಕೋಡಿ ತಾಲೂಕಿನ ಕಾಡಾಪುರ ಗ್ರಾಮದ ರೈತ ಅಮೀತ ಕೋಳಿ
ಲಾಕ್ಡೌನ್ಗೂ ಮೊದಲು 1 ಕೆಜಿಗೆ 20 ರೂ. ಸಿಗುತ್ತಿದ್ದ ಟೊಮ್ಯಾಟೊಗೆ ಈಗ ಕೇವಲ 2 ರೂ. ಬೇಡಿಕೆನೂ ಬರುತ್ತಿಲ್ಲ.
120 ಟನ್ ಟೊಮ್ಯಾಟೋ ಬೆಳೆ ಕೆನಾಲ್ಗೆ ಸುರಿದ ರೈತ.
ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಾಡಾಪುರ ಗ್ರಾಮದ ರೈತ ಅಮೀತ ಕೋಳಿ ಸುಮಾರು 120 ಟನ್ ಟೊಮ್ಯಾಟೊ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲಾಗದೇ ಇತ್ತ ಬೆಲೆನೂ ಸಿಗದೇ ಬೇಸತ್ತು ಸುಮಾರು 8 ಲಕ್ಷದ ಬೆಳೆ ನಾಶ ಮಾಡಿದ್ದಾನೆ.
ಲಾಕ್ಡೌನ್ಗೂ ಮೊದಲು 1 ಕೆಜಿಗೆ 20 ರೂ. ಸಿಗುತ್ತಿದ್ದ ಟೊಮ್ಯಾಟೊಗೆ ಈಗ ಕೇವಲ 2 ರೂ. ಬೇಡಿಕೆನೂ ಬರುತ್ತಿಲ್ಲ. ಅಲ್ಲದೇ ಗಲ್ಲಿಗಲ್ಲಿಯಲ್ಲಿ ತಿರುಗಾಡಿ ಮಾರಾಟ ಮಾಡಿದ್ರೆ ಪೆಟ್ರೋಲ್ ದುಡ್ಡು ಸಹ ಬರುತ್ತಿಲ್ಲ ಎಂದು ರೈತ ಆಕ್ರೋಶಗೊಂಡು ಈ ನಿರ್ಧಾರಕ್ಕೆ ಬಂದಿದ್ದಾನೆ.