ಕರ್ನಾಟಕ

karnataka

ETV Bharat / state

ಭಾರೀ ನೀರಿಗೆ ಹೆದರಿ ಸೇತುವೆಯಿಂದ ಜಿಗಿದ ಎತ್ತುಗಳು:  ಮುಂದೇನಾಯ್ತು? - Farmer, Ox rescued in Belagavi

ಅಥಣಿ ತಾಲೂಕಿನಲ್ಲಿ ಭಾರೀ ಮಳೆಯಾಗಿದ್ದು, ಹಲವಾರು ಕಡೆ ಬೆಳೆ ನಾಶವಾದರೆ, ಇನ್ನೂ ಕೆಲವು ಕಡೆ ಜನ ಜಾನುವಾರು ಮಹಾ ಮಳೆಗೆ ಬಲಿಯಾಗುತ್ತಿದ್ದಾರೆ.

ರೈತ, ಎತ್ತು ರಕ್ಷಣೆ

By

Published : Oct 26, 2019, 3:40 AM IST

ಬೆಳಗಾವಿ: ಜಿಲ್ಲೆಯಾದ್ಯಂತ ಮಹಾಮಳೆಗೆ ಜನ, ಜಾನುವಾರು ತತ್ತರಿಸಿದ್ದು, ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ರೈತರ ಎತ್ತು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ.

ಹಳ್ಳದಲ್ಲಿ ಕೊಚ್ಚಿ ಹೋಗ್ತಿದ್ದ ರೈತ, ಎತ್ತು ರಕ್ಷಣೆ

ರೈತಗೋಸಿರ್ ಕಂಕನವಾಡಿ ತನ್ನ ಪಕ್ಕದ ಜಮೀನಿಗೆ ಮೇವು ತರಲು ಹೋದಾಗ ಸನಿಹದಲ್ಲೇ ಇದ್ದ ಹಿರೇಹಳ್ಳದಲ್ಲಿ ಹಠಾತ್ತನೆ ನೀರಿನ ಪ್ರಮಾಣ ಹೆಚ್ಚಾಗಿದೆ. ಎತ್ತುಗಳು ನೀರಿನ ರಭಸಕ್ಕೆ ಬೆದರಿ ಸೇತುವೆಯಿಂದ ಕೆಳಗೆ ಜಿಗಿದಿವೆ.

ಪರಿಣಾಮ ರೈತನೂ ಕೂಡ ನೀರಿಗೆ ಬಿದ್ದಿದ್ದಾನೆ. ಅದೃಷ್ಟವಶಾತ್​ ರೈತ ಹಾಗೂ ಒಂದು ಎತ್ತನ್ನು ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ. ಆದರೆ, ಮತ್ತೊಂದು ಎತ್ತು ನೀರಿನಲ್ಲಿ ಕೊಚ್ಚಿ ಹೋಗಿವೆ.

ABOUT THE AUTHOR

...view details