ಅಥಣಿ: ಕರ್ನಾಟಕ ರಾಜ್ಯ ರೈತ ಸಂಘಕ್ಕೂ ಯಾವುದೇ ರಾಜಕೀಯ ಪಕ್ಷಕ್ಕೂ ಸಂಬಂಧವಿಲ್ಲ. ಎಪಿಎಂಸಿ ತಿದ್ದುಪಡಿ ಕಾಯ್ದೆ ಮೂಲಕ ಎಪಿಎಂಸಿ ಖಾಸಗೀಕರಣ ಜಾರಿ ಮಾಡಿದರೆ, ರಸಗೊಬ್ಬರ, ಬಿತ್ತನೆ ಬೀಜಗಳನ್ನು ತೆಗೆದುಕೊಳ್ಳಲು ದಲ್ಲಾಳಿಗಳ ಮುಂದೆ ಕೈಜೋಡಿಸಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಭೂ ಸುಧಾರಣಾ ಕಾಯ್ದೆಯಿಂದ ರೈತರು ಜಮೀನುಗಳ ಹಕ್ಕು ಕಳೆದುಕೊಳ್ಳುವ ಭೀತಿಯ ಜೊತೆಗೆ ರೈತರ ಭೂಮಿಯ ಮೇಲಿನ ಹಕ್ಕು ಬೇರೆಯವರ ಪಾಲಾಗುವ ಸಾಧ್ಯತೆ ಹೆಚ್ಚು ಎಂದು ಅಥಣಿಯ ರೈತ ಮುಖಂಡ ಮಹಾದೇವ ಮಡಿವಾಳ ಹೇಳಿದರು.
'ಎಪಿಎಂಸಿ ತಿದ್ದುಪಡಿ ಕಾಯ್ದೆ ರೈತರಿಗೆ ಮಾರಕ' - athani news
ಭೂಸುಧಾರಣೆ ಕಾಯ್ದೆ, ಎಪಿಎಂಸಿ ಖಾಸಗೀಕರಣವನ್ನು ಯಾವ ರೈತರೂ ವಿರೋಧಿಸುತ್ತಿಲ್ಲ. ಇದನ್ನು ವಿರೋಧ ಪಕ್ಷಗಳು ಮಾತ್ರ ವಿರೋಧಿಸುತ್ತಿವೆ ಎಂದು ಅಥಣಿ ಪಟ್ಟಣದಲ್ಲಿ ಡಿಸಿಎಂ ಸವದಿ ಹೇಳಿಕೆ ನೀಡಿರುವ ಬೆನ್ನಲ್ಲೇ ಅಥಣಿ ತಾಲೂಕಿನ ರೈತ ಮುಖಂಡ ಮಹಾದೇವ ಮಡಿವಾಳ ಪ್ರತಿಕ್ರಿಯೆ ನೀಡಿದ್ದಾರೆ.
ಅಥಣಿ
ಭೂಸುಧಾರಣೆ ತಿದ್ದುಪಡಿ ಕಾಯ್ದೆಗೆ ನಮ್ಮ ವಿರೋಧವಿದೆ. ಅಥಣಿ ತಾಲೂಕಿನ ರೈತರಾದ ನಾವು ಯಾವುದೇ ರಾಜಕೀಯ ಪಕ್ಷದೊಂದಿಗೂ ಸಂಬಂಧ ಹೊಂದಿಲ್ಲ. ನಮ್ಮ ಪ್ರತಿಭಟನೆಯಲ್ಲಿ ರಾಜಕಾರಣಿಗಳಿಲ್ಲ, ಯಾವುದೇ ಪಕ್ಷದವರು ನಮಗೆ ಹೆಸರಿಡುವ ಅಗತ್ಯವಿಲ್ಲ. ಈ ಕಾಯ್ದೆಗಳನ್ನು ಇನ್ನೊಂದು ಸಲ ಪರಿಶೀಲನೆ ಮಾಡಿ ರೈತರಿಗೆ ಅನುಕೂಲವಾಗುವಂತಹ ಯೋಜನೆಯನ್ನು ಜಾರಿ ಮಾಡಬೇಕೆಂದು ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ ಎಂದು ಮಹಾದೇವ ಮಡಿವಾಳ ನುಡಿದರು.