ಅಥಣಿ(ಬೆಳಗಾವಿ): ಕೇಂದ್ರ ಸರ್ಕಾರ ಭೂ ಸುಧಾರಣಾ ಹಾಗೂ ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಕಳೆದ 70 ದಿನಗಳಿಂದ ದೆಹಲಿ ಗಡಿಯಲ್ಲಿ ಪಂಜಾಬ್ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾಕಾರರನ್ನು ಕೇಂದ್ರ ಸರ್ಕಾರ ಆತಂಕವಾದಿಗಳ ರೀತಿಯಲ್ಲಿ ನೋಡುತ್ತಿದ್ದಾರೆಂದು ಅಥಣಿ ರೈತ ಮುಖಂಡ ಎಂ ಸಿ ತಾಂಬೋಳಿ ಆರೋಪಿಸಿದರು.
ಮೋದಿ ಸರ್ಕಾರ ರೈತರನ್ನು ಆತಂಕವಾದಿಗಳ ರೀತಿಯಲ್ಲಿ ನೋಡುತ್ತಿದೆ: ಎಂ.ಸಿ ತಾಂಬೋಳಿ - ಅಥಣಿ ರೈತ ಮುಖಂಡ ಎಂಸಿ ತಾಂಬೋಳಿ
ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಕೇಂದ್ರ ಸರ್ಕಾರ ಆತಂಕವಾದಿಗಳ ರೀತಿಯಲ್ಲಿ ನೋಡುತ್ತಿದ್ದಾರೆ. ಪ್ರತಿಭಟನೆ ತಡೆಯಲು ದೆಹಲಿ ಗಡಿಯ ರಸ್ತೆಗಳಿಗೆ ಮುಳ್ಳು ತಂತಿ ಹಾಗೂ ತಡೆಗೋಡೆ ನಿರ್ಮಿಸಿದ್ದಾರೆ. ಪಂಜಾಬ್ ರೈತರ ಪ್ರತಿಭಟನೆ ಅಥಣಿ ರೈತರು ಸಾಥ್ ನೀಡುತ್ತೇವೆ ಎಂದು ಅಥಣಿ ರೈತರು ಹೇಳಿದ್ದಾರೆ.
'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಕೇಂದ್ರ ಸರ್ಕಾರ ಆತಂಕವಾದಿಗಳ ರೀತಿಯಲ್ಲಿ ನೋಡುತ್ತಿದೆ. ಪ್ರತಿಭಟನೆ ತಡೆಯಲು ದೆಹಲಿ ಗಡಿಯ ರಸ್ತೆಗಳಿಗೆ ಮುಳ್ಳು ತಂತಿ ಹಾಕಿ ತಡೆಗೋಡೆ ನಿರ್ಮಿಸಿದ್ದಾರೆ. ಚೀನಾ ಹಾಗೂ ಪಾಕಿಸ್ತಾನ ಗಡಿಯಲ್ಲೂ ಇಷ್ಟು ಭದ್ರತೆ ಒದಗಿಸಿಲ್ಲ. ರೈತರ ಪ್ರತಿಭಟನೆ ತಡೆಯಲು ಮೋದಿ ಸರ್ಕಾರದ ಈ ಕ್ರಮವನ್ನು ಖಂಡಿಸುತ್ತೇವೆ. ಪ್ರತಿಭಟನೆ ಮಾಡಲು ಸರ್ಕಾರ ಅನುವು ಮಾಡಿಕೊಡಬೇಕು ಹಾಗೂ ಸರ್ಕಾರ ತಕ್ಷಣವೇ ತಡೆಗೋಡೆ ಮುಳ್ಳು ತಂತಿ ತೆರವುಗೊಳಿಸಬೇಕೆಂದು ಆಗ್ರಹಿಸಿದರು.
ಪಂಜಾಬ್ ರೈತರ ಪ್ರತಿಭಟನೆ ಅಥಣಿ ರೈತರು ಸಾಥ್ ನೀಡುತ್ತೇವೆ. ಕೇಂದ್ರ ಹಾಗೂ ರಾಜ್ಯ ಸಚಿವರು ಸಿಕ್ಕಲ್ಲಿ ಅವರಿಗೆ ಘೇರಾವ್ ಹಾಕುತ್ತೇವೆ. ಆದಷ್ಟು ಬೇಗ ರೈತರಿಗೆ ಮಾರಕವಾಗುವ ಕಾಯ್ದೆಗಳನ್ನು ವಾಪಸ್ ಪಡೆದುಕೊಳ್ಳಬೇಕು ಎಂದು ಹೇಳಿದರು. ರೈತ ಕುಲವನ್ನು ಕಾಪಾಡಲು ಸರ್ಕಾರ ಮುಂದಾಗಬೇಕು ಎಂದು ಮನವಿ ಮಾಡಿಕೊಂಡರು.