ಬಳ್ಳಾರಿ :ಜಿಲ್ಲೆಯ ಸಿರುಗುಪ್ಪ ತಾಲೂಕಿನ ಭೈರಾಪುರ ಗ್ರಾಮದ ಹೊರ ವಲಯದಲ್ಲಿ ಇಂದು ಭತ್ತ ಕಟಾವು ಮಾಡುವ ವೇಳೆ ಕೆಳಗಡೆ ಬಿದ್ದ ವಿದ್ಯುತ್ ವಾಹಕ ತಂತಿಯನ್ನ ಮುಟ್ಟಿದ ಪರಿಣಾಮ ರೈತನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಭೈರಾಪುರ ಗ್ರಾಮದ ಹನುಮಂತಗೌಡ (34) ಎಂಬಾತ ಮೃತಪಟ್ಟ ರೈತನೆಂದು ಗುರುತಿಸಲಾಗಿದೆ. ಇಂದು ಮುಂಜಾನೆ ಭತ್ತದ ಕಟಾವು ಮಾಡುವಾಗ ವಿದ್ಯುತ್ ವಾಹಕ ತಂತಿಯೊಂದು ಕೆಳಗಡೆ ಬಿದ್ದಿದೆ. ವಿದ್ಯುತ್ ಪೂರೈಕೆ ಇಲ್ಲ ಎಂದುಕೊಂಡು ಕೆಳಗೆ ಬಿದ್ದ ವಿದ್ಯುತ್ ತಂತಿ ಮುಟ್ಟಿ ರೈತ ಮೃತಪಟ್ಟಿದ್ದಾನೆಂದು ಕುಟುಂಬದ ಮೂಲಗಳು ತಿಳಿಸಿವೆ.