ಅಥಣಿ:ಅತಿಯಾದ ಸಾಲಬಾಧೆಯಿಂದ ಭಯಬಿದ್ದು ಯುವ ರೈತ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.
ಸಾಲಬಾಧೆಗೆ ಹೆದರಿ ಅಥಣಿ ಕಕಮರಿ ಗ್ರಾಮದ ಯುವ ರೈತ ಆತ್ಮಹತ್ಯೆ - ಸಾಲ ಬಾಧೆಗೆ ಅಥಣಿ ಕಕಮರಿ ಗ್ರಾಮದ ಯುವ ರೈತ ಆತ್ಮಹತ್ಯೆ
ಅತಿಯಾಗಿ ಸಾಲ ಮಾಡಿಕೊಂಡು ತೀರಿಸಲಾಗದೆ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಥಣಿ ತಾಲೂಕಿನ ಕಕಮರಿ ಗ್ರಾಮದಲ್ಲಿ ನಡೆದಿದೆ.
ಸಾಲ ಬಾಧೆಗೆ ಅಥಣಿ ಕಕಮರಿ ಗ್ರಾಮದ ಯುವ ರೈತ ಆತ್ಮಹತ್ಯೆ
ಅಥಣಿ ತಾಲೂಕಿನ ಕಕಮರಿ ಗ್ರಾಮದ ಈರಪ್ಪ ಗಿರಿಮಲ್ಲ ಬಿರಾದಾರ (32) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಲಾಕ್ಡೌನ್ ಸಮಯದಲ್ಲಿ ದಾಳಿಂಬೆ ಫಸಲು ಮಾರಾಟವಾಗದ ಹಿನ್ನೆಲೆ ಅಧಿಕ ಪ್ರಮಾಣದ ನಷ್ಟ ಸಂಭವಿಸಿದ್ದು ಹಾಗೂ ವಾಹನಗಳ ಸಾಲದ ಜೊತೆಗೆ ವಿವಿಧ ಬ್ಯಾಂಕಿನಿಂದ ಸುಮಾರು ನಾಲ್ಕು ಲಕ್ಷ ರೂಪಾಯಿ ಸಾಲ ಮಾಡಿಕೊಂಡಿರುವ ಹಿನ್ನೆಲೆ ಸಾಲ ತೀರಿಸಲಾಗದೆ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಇನ್ನು ಈ ಕುರಿತಂತೆ ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.