ಚಿಕ್ಕೋಡಿ: ಸಾಲ ಬಾಧೆಯಿಂದ ಬೇಸತ್ತು ವಿಷ ಕುಡಿದು ರೈತ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ನಡೆದಿದೆ.
ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ - ಚಿಕ್ಕೋಡಿ ಅಪರಾಧ ಸುದ್ದಿ
ಸಾಲ ಬಾಧೆಯಿಂದ ಬೇಸತ್ತು ವಿಷ ಕುಡಿದು ರೈತ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ನಡೆದಿದೆ.
ಇಂಗಳಿ ಗ್ರಾಮದ ಸದಾಶಿವ ಸಾತು ಚಿಂಚಲೆ (65) ಮೃತ ರೈತನಾಗಿದ್ದು, ಈತ ತಮ್ಮ ಕೃಷಿ ವ್ಯವಸಾಯಕ್ಕಾಗಿ ಗ್ರಾಮದ ವಿವಿಧ ಸಹಕಾರಿ ಸಂಸ್ಥೆಗಳು ಹಾಗೂ ಇನ್ನಿತರ ಆರ್ಥಿಕ ಸಂಸ್ಥೆಗಳಿಂದ ಸುಮಾರು ಐದು ಲಕ್ಷ ಸಾಲ ಪಡೆದಿದ್ದು, ಇತ್ತೀಚೆಗೆ ಬಂದ ಕೃಷ್ಣಾ ನದಿ ಪ್ರವಾಹದಿಂದ ಹಾಗೂ ಅತಿವೃಷ್ಟಿಯಿಂದ ತಮ್ಮ ಹೊಲದಲ್ಲಿದ್ದ ಕಬ್ಬು ಬೆಳೆ ಹಾಗೂ ಇನ್ನಿತರ ಬೆಳೆ ನಷ್ಟವಾಗಿದ್ದರಿಂದ ಕೃಷಿ ವ್ಯವಸಾಯಕ್ಕೆ ಮಾಡಿದ ಸಾಲಬಾಧೆಯಿಂದ ವಿಷ ಸೇವಿಸಿದ್ದಾನೆ. ನಂತರ ಈತನನ್ನು ನೆರೆಯ ಮಹಾರಾಷ್ಟ್ರ ರಾಜ್ಯದ ಮಿರಜ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.
ಇನ್ನು ಚಿಕಿತ್ಸೆ ಫಲಕಾರಿಯಾಗದೇ ರೈತ ಸದಾಶಿವ ಚಿಂಚಲೆ ಮೃತಪಟ್ಟಿದ್ದಾನೆ.