ಬೆಳಗಾವಿ: ಭೀಕರ ಪ್ರವಾಹಕ್ಕೆ ಕೊಚ್ಚಿಹೋದ ಬೆಳೆ ಕಂಡು, ರೈತನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಮದುರ್ಗ ತಾಲೂಕಿನ ಮಾಗನೂರು ಗ್ರಾಮದಲ್ಲಿ ನಡೆದಿದೆ.
ಪ್ರವಾಹದಿಂದ ಬೆಳೆ ಎಲ್ಲ ನಾಶ... ವಿಷ ಸೇವಿಸಿ ರೈತ ಆತ್ಮಹತ್ಯೆ - ಬೆಳಗಾವಿ ಪ್ರವಾಹ ಸುದ್ದಿ
ಬೆಳಗಾವಿ ರೈತ ತನ್ನ ಬೆಳೆ ಎಲ್ಲ ಪ್ರವಾಹದಿಂದ ಕೊಚ್ಚಿ ಹೋಗಿದ್ದನ್ನ ಕಂಡು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಲಕ್ಷ್ಮಣ ಲಕ್ಕಪ್ಪ ತ್ಯಾಪಿ ಆತ್ಮಹತ್ಯೆಗೆ ಶರಣಾದ ರೈತ. ಪ್ರವಾಹದಿಂದ ತನ್ನ ಬೆಳೆಯಲ್ಲ ಕೊಚ್ಚಿಕೊಂಡು ಹೋಗಿದ್ದನ್ನು ಕಂಡು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಗ್ರಾಮದಲ್ಲಿ ಈತನಿಗೆ ಕೇವಲ ಅರ್ಧ ಎಕರೆ ಭೂಮಿ ಮಾತ್ರ ಇದ್ದು, 6 ಎಕರೆ ಲಾವಣಿ ಮಾಡಿದ್ದ. ಖಾಸಗಿ ಸಾಲ ಮಾಡಿ ಕಬ್ಬು ಬೆಳೆದಿದ್ದ.
ಹುಲುಸಾಗಿ ಬೆಳೆದ ಬೆಳೆ ಮಲಪ್ರಭಾ ನದಿ ಪ್ರವಾಹಕ್ಕೆ ಕೊಚ್ಚಿಹೋಗಿದ್ದು, ನೀರು ಇಳಿಕೆಯಾದ ಮೇಲೆ ಕೊಚ್ಚಿ ಹೋಗಿರುವ ಬೆಳೆಯನ್ನು ಕಂಡು ಹೊಲದಲ್ಲಿಯೇ ಕ್ರಿಮಿನಾಶಕ ಸೇವಿಸಿದ್ದಾನೆ. ತಕ್ಷಣ ಅವರನ್ನು ರಾಮದುರ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ರೈತ ಸಾವಿಗಿಡಾಗಿದ್ದಾನೆ. ಈ ಬಗ್ಗೆ ಕಟಕೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.