ಕರ್ನಾಟಕ

karnataka

ETV Bharat / state

ಸಾಲಬಾಧೆ: ಅಥಣಿಯಲ್ಲಿ ವಿಷ ಸೇವಿಸಿ ರೈತ ಆತ್ಮಹತ್ಯೆ

ರೈತ ಕೃಷಿ ಚಟುವಟಿಕೆಗಳಿಗೆ ಬ್ಯಾಂಕ್​​ ಸಾಲ ಹಾಗೂ ಕೈಗಡ ಸಾಲ ಮಾಡಿದ್ದ. ಸಾಲ ನೀಡಿದವರು ಹಣ ಮರಳಿಸುವಂತೆ ಒತ್ತಾಯಿಸುತ್ತಿದ್ದರಿಂದ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಅಥಣಿಯಲ್ಲಿ ಸಾಲಬಾಧೆ ವಿಷ ಸೇವಿಸಿ ರೈತ ಆತ್ಮಹತ್ಯೆ.
ಅಥಣಿಯಲ್ಲಿ ಸಾಲಬಾಧೆ ವಿಷ ಸೇವಿಸಿ ರೈತ ಆತ್ಮಹತ್ಯೆ.

By

Published : Jun 26, 2020, 11:08 AM IST

ಅಥಣಿ: ತಾಲೂಕಿನ ಕೊಡಗನೂರು ಗ್ರಾಮದಲ್ಲಿ ಸಾಲಬಾಧೆಯಿಂದ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಹಸನಸಾಬ್ ವಜೀರಸಾಬ್ ಪಠಾಣ್​ (35) ಎಂಬ ರೈತ ಕೃಷಿ ಚಟುವಟಿಕೆಗಳಿಗೆ ಬ್ಯಾಂಕ್​​ ಸಾಲ ಹಾಗೂ ಕೈಗಡ ಸಾಲ ಮಾಡಿದ್ದ. ಕೈಗಡ ಸಾಲ ನೀಡಿದವರು ಹಣ ಮರಳಿಸುವಂತೆ ಒತ್ತಾಯ ಮಾಡುತಿದ್ದರು ಎಂಬ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕೃಷಿ ಚಟುವಟಿಕೆಗಳಿಗೆ ಹಾಗೂ ವಾಹನಗಳ ಖರೀದಿಗೆ 10 ಲಕ್ಷ ರೂಪಾಯಿಗಳ ಸಾಲ ಮಾಡಿದ್ದ. ಆಲಬಾಳ ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆಯಿಂದ 14 ಲಕ್ಷ ರೂ. ವಾಹನಗಳ ಬಾಡಿಗೆ ಹಣ ಬರಬೇಕಿತ್ತು. ಆದರೆ ಆ ದುಡ್ಡು ಬರುವುದಕ್ಕೆ ವಿಳಂಬ ಆಗಿದ್ದಕ್ಕೆ ಕೈಗಡ ಸಾಲ ಕೊಟ್ಟವರ ಒತ್ತಾಯದಿಂದ ನಮ್ಮಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅವರ ಸಹೋದರ ರಫಿಕ್ ಪಠಾಣ್​ ತಿಳಿಸಿದ್ದಾರೆ. ಈ ಕುರಿತು ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details