ಕರ್ನಾಟಕ

karnataka

ETV Bharat / state

ಬೆಳಗಾವಿ: ಪ್ರೀತಿಯ ಅಪ್ಪುಗಾಗಿ 17ನೇ ಸೀಟ್​ ಬುಕ್ ಮಾಡಿದ ಅಭಿಮಾನಿ

ಬೆಳಗಾವಿ ಚಿತ್ರಮಂದಿರದಲ್ಲಿ 17ನೇ ನಂಬರ್ ಸೀಟ್​ ಮೇಲೆ ಅಪ್ಪು ಫೋಟೋ ಇಟ್ಟು, ಹಾರ ಹಾಕಿ ಪೂಜೆ ಸಲ್ಲಿಸುವ ಮೂಲಕ ಅಭಿಮಾನಿಯೊಬ್ಬ ಅಭಿಮಾನ ಮೆರೆದಿದ್ದಾರೆ‌.

puneeth rajkumar
ಪುನೀತ್ ರಾಜ್‍ಕುಮಾರ್​ಗಾಗಿ 17 ನೇ ಸೀಟ್​ ಬುಕ್ ಮಾಡಿದ ಅಭಿಮಾನಿ

By

Published : Mar 17, 2022, 9:53 AM IST

ಬೆಳಗಾವಿ: ಇಂದು ದಿ. ಡಾ. ಪುನೀತ್ ರಾಜ್‍ಕುಮಾರ್ ಅವರ 47 ನೇ ಹುಟ್ಟುಹಬ್ಬ. ಇನ್ನೊಂದೆಡೆ ಅಪ್ಪು ಅಭಿನಯದ ಕೊನೆಯ ಚಿತ್ರ 'ಜೇಮ್ಸ್' ಬಿಡುಗಡೆಯಾಗಿದೆ. ಈ ಹಿನ್ನೆಲೆ ನೆಚ್ಚಿನ ನಟನ ಜನ್ಮ ದಿನವನ್ನ ಬೆಳಗಾವಿಯ ಅಭಿಮಾನಿಯೊಬ್ಬ ವಿಶೇಷವಾಗಿ ಸಂಭ್ರಮಿಸಿದ್ದಾರೆ.

ಇಲ್ಲಿನ ಚಿತ್ರಮಂದಿರದಲ್ಲಿ 17 ನಂಬರ್ ಸೀಟ್​ ಮೇಲೆ ಅಪ್ಪು ಫೋಟೋ ಇಟ್ಟು, ಹಾರ ಹಾಕಿ ಪೂಜೆ ಸಲ್ಲಿಸುವ ಮೂಲಕ ಅಭಿಮಾನ ಮೆರೆದಿದ್ದಾರೆ‌. ಈ ವೇಳೆ, ಸಂತಸ ಹಂಚಿಕೊಂಡ ಅಭಿಮಾನಿ, ಅಪ್ಪು ನಮ್ಮ ಜೊತೆಗಿದ್ದಾರೆ, ಅವರ ಜೊತೆಗೆ ನಾವು ಚಿತ್ರ ವೀಕ್ಷಿಸುತ್ತಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಪುನೀತ್ ರಾಜ್‍ಕುಮಾರ್​ಗಾಗಿ 17 ನೇ ಸೀಟ್​ ಬುಕ್ ಮಾಡಿದ ಅಭಿಮಾನಿ

ಒಂದೆಡೆ, ಪುನೀತ್ ರಾಜ್‌ಕುಮಾರ್ ದೈಹಿಕವಾಗಿ ನಮ್ಮ ಜೊತೆ ಇಲ್ಲ ಎಂಬ ನೋವು ಅಭಿಮಾನಿಗಳ ಹೃದಯ ಹಿಂಡಿ ಹಿಪ್ಪೆ ಮಾಡುತ್ತಿದೆ. ಇನ್ನೊಂದೆಡೆ 'ಜೇಮ್ಸ್' ಸಿನಿಮಾ ನೋಡಿ ಕಣ್ತುಂಬಿಕೊಂಡ ಅಭಿಮಾನಿಗಳು 'ಅಪ್ಪು' ಅಭಿನಯಕ್ಕೆ ಚಪ್ಪಾಳೆ ತಟ್ಟಿ, ಶಿಳ್ಳೆ ಹೊಡೆಯುತ್ತಿದ್ದಾರೆ.

ABOUT THE AUTHOR

...view details