ಬೆಳಗಾವಿ:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಅಭಿಮಾನಿಯೊಬ್ಬ ಬಾದಾಮಿ ಹಾಲು ನೀಡಿ ಸತ್ಕರಿಸಿದ್ದಾನೆ. ಬೆಳಗಾವಿಯಲ್ಲಿ ಅತ್ಯಾಧುನಿಕ ರವೀಂದ್ರ ಕೌಶಿಕ್ ಇ-ಗ್ರಂಥಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಷಣ ಆರಂಭಿಸುವ ಮುನ್ನ ಅಭಿಮಾನಿ ವೇದಿಕೆಗೆ ಆಗಮಿಸಿ ಬಾದಾಮಿ ಹಾಲು ನೀಡಿದ್ದಾನೆ.
ಇಲ್ಲಿನ ಶಿವಾಜಿ ಉದ್ಯಾನವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿಎಂ ಭಾಷಣ ಮಾಡಲು ಆಗಮಿಸುತ್ತಿದ್ದಂತೆ ಬಾದಾಮಿ ಹಾಲಿನ ಬಾಟಲ್ ನೀಡಲು ಬಂದ ಅಭಿಮಾನಿಯನ್ನು ಪೊಲೀಸರು ತಡೆದರು. ಬಳಿಕ ಸಿಎಂ ಆತನಿಗೆ ಮೇಲೆ ಬರಲು ಬಿಡಿ ಎಂದು ಸೂಚಿಸಿದ್ದು, ಅಭಿಮಾನಿ ನೀಡಿದ ಹಾಲಿನ ಬಾಟಲ್ ಸ್ವೀಕರಿಸಿದರು.