ಕರ್ನಾಟಕ

karnataka

ETV Bharat / state

ಕೊರೊನಾದಿಂದ ಮುಕ್ತಿ: ಪಟಾಕಿ ಸಿಡಿಸಿ, ಹೂಮಾಲೆ, ಆರತಿ ಎತ್ತಿ ಸ್ವಾಗತಿಸಿದ ಕುಟುಂಬಸ್ಥರು - Belagavi Corona News

ಗುಣಮುಖನಾಗಿ ಬಂದ ವ್ಯಕ್ತಿ ಸೀಲ್‌ಡೌನ್ ಬ್ಯಾರಿಕೇಡ್‌ಗೆ ರಿಬ್ಬನ್ ಕಟ್ ಮಾಡಿ ಏರಿಯಾಗೆ ಪ್ರವೇಶಿಸಿದರು. ಬಳಿಕ ಹಾರ ಹಾಕಿ, ಪಟಾಕಿ ಸಿಡಿಮದ್ದು ಸಿಡಿಸಿ ಮನೆಗೆ ಕರೆದೊಯ್ಯಲಾಯಿತು.

ಕೊರೊನಾದಿಂದ ಗುಣಮುಖ ಅದ್ದೂರಿಯಾಗಿ ಸ್ವಾಗತಿಸಿದ ಕುಟುಂಬಸ್ಥರು
ಕೊರೊನಾದಿಂದ ಗುಣಮುಖ ಅದ್ದೂರಿಯಾಗಿ ಸ್ವಾಗತಿಸಿದ ಕುಟುಂಬಸ್ಥರು

By

Published : Aug 3, 2020, 10:03 AM IST

ಬೆಳಗಾವಿ: ಕೊರೊನಾದಿಂದ ಗುಣಮುಖನಾಗಿ ಮನೆಗೆ ಬಂದ ವ್ಯಕ್ತಿಯನ್ನು ಕುಟುಂಬಸ್ಥರು ಹಾಗೂ ಸ್ನೇಹಿತರು ಅದ್ಧೂರಿಯಾಗಿ ಸ್ವಾಗತಿಸಿದ ಘಟನೆ ಬೆಳಗಾವಿಯ ಖಡಕ್ ಗಲ್ಲಿಯಲ್ಲಿ ನಡೆದಿದೆ.

ಕೊರೊನಾದಿಂದ ಗುಣಮುಖ ಅದ್ದೂರಿಯಾಗಿ ಸ್ವಾಗತಿಸಿದ ಕುಟುಂಬಸ್ಥರು

ಗುಣಮುಖನಾಗಿ ಬಂದ ವ್ಯಕ್ತಿ ಸೀಲ್‌ಡೌನ್ ಬ್ಯಾರಿಕೇಡ್‌ಗೆ ರಿಬ್ಬನ್ ಕಟ್ ಮಾಡಿ ಏರಿಯಾಗೆ ಪ್ರವೇಶಿಸಿದರು. ಬಳಿಕ ಹಾರ ಹಾಕಿ, ಪಟಾಕಿ ಸಿಡಿಮದ್ದು ಸಿಡಿಸಿ ಮನೆಗೆ ಕರೆದೊಯ್ಯಲಾಯಿತು.

ಮನೆಗೆ ಈ ವ್ಯಕ್ತಿ ಆಗಮಿಸುತ್ತಿದ್ದಂತೆ ಕುಟುಂಬಸ್ಥರು ಆರತಿ ಬೆಳಗಿ, ದೃಷ್ಟಿ ತೆಗೆದು ಸ್ವಾಗತ ಮಾಡಿಕೊಂಡರು. ಹತ್ತು ದಿನಗಳ ಹಿಂದೆ ಖಡಕ್ ಗಲ್ಲಿಯ 35 ವರ್ಷ ವಯಸ್ಸಿನ ಈ ವ್ಯಕ್ತಿಗೆ ಕೊರೊನಾ ‌ಸೋಂಕು ವಕ್ಕರಿಸಿತ್ತು. ಇಲ್ಲಿನ ಕೋವಿಡ್ ವಾರ್ಡ್​​​​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈತ‌ ನಿನ್ನೆ ಗುಣಮುಖನಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ABOUT THE AUTHOR

...view details