ಕರ್ನಾಟಕ

karnataka

ETV Bharat / state

ನಕಲಿ ನೋಟು ಸರಬರಾಜು: ಐವರು ಅಂರಾತಾಜ್ಯ ಕಳ್ಳರು ಅರೆಸ್ಟ್​ ​ - ನಕಲಿ ನೋಟು ಸರಬರಾಜು

ಚಿಕ್ಕೋಡಿಯಲ್ಲಿ ಅಸಲಿ ನೋಟು ಪಡೆದುಕೊಂಡು ಹಣವನ್ನು ದ್ವಿಗುಣ ಮಾಡಿಕೊಡುವುದಾಗಿ ನಂಬಿಸಿ ಖೋಟಾ ನೋಟು ಸಾಗಿಸುತ್ತಿದ್ದ ಅಂತಾರಾಜ್ಯ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.

ಐವರು ಅಂರಾತಾಜ್ಯ ಕಳ್ಳರು ಅಂದರ್​
police arrested five accused at Chikodi

By

Published : Feb 21, 2020, 11:43 PM IST

ಚಿಕ್ಕೋಡಿ:ನಕಲಿ ನೋಟು ಸರಬರಾಜು ಮಾಡುತ್ತಿದ್ದ ಅಂತಾರಾಜ್ಯ ಕಳ್ಳರನ್ನು ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸರು ಬಂಧಿಸಿದ್ದಾರೆ.

ಮಹಾರಾಷ್ಟ್ರದ ಕೊಲ್ಲಾಪುರದ ಅಮರ ಶಂಕರ ಅಂಬೇಕರ (28), ಕಾಗಲ್ ತಾಲೂಕಿನ ಬೆಲ್ಲೋಳಿಬಾಚಲಿ ಗ್ರಾಮದ ಧೈರ್ಯಶೀಲ ಬಾಬುರಾವ್​ ಪಾಟೀಲ್​ (42), ಬಾಬಾಸೋ ವಸಂತ ಪಾಟೀಲ್​ (31) ಮತ್ತು ನಿಪ್ಪಾಣಿ ಪಟ್ಟಣದ ರಾಜೇಶ ಮಾರುತಿ ಮೋಹಿತೆ (48) ಮತ್ತು ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಅಶೋಕ ಶಂಕರ ತೇಲಿ(50) ಬಂಧಿತ ಆರೋಪಿಗಳು.

ಇವರು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಮತನೂರ ಕ್ರಾಸ್ ಬಳಿ ಎರಡು ವಾಹನಗಳಲ್ಲಿ 23.88 ಲಕ್ಷ ರೂ. ನಕಲಿ ಮತ್ತು 12 ಸಾವಿರ ರೂ.ಮೌಲ್ಯದ ಅಸಲಿ ನೋಟು ಸಾಗಿಸುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಸಂಕೇಶ್ವರ ಠಾಣೆ ಪೊಲೀಸರು, ಕಳ್ಳರನ್ನು ಬಂಧಿಸಿದ್ದಾರೆ. ಬಂಧಿತರಿಂದ 500 ರೂ. ಮುಖಬೆಲೆಯ 12 ಬಂಡಲ್ ನಕಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮಣ್​ ನಿಂಬರಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ವೇಳೆ ನೋಟು ಸಾಗಾಣಿಕೆಗೆ ಬಳಸುತ್ತಿದ್ದ ಎರಡು ಕಾರು ಹಾಗೂ 5 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details