ಚಿಕ್ಕೋಡಿ:ಚಿಂಚಲಿ ಸುಪ್ರಸಿದ್ದ ಮಾಯಕ್ಕಾ ದೇವಿ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಭಕ್ತಾಧಿಗಳು ಕರ್ನಾಟಕ, ಮಹಾರಾಷ್ಟ್ರ, ಗೋವಾ, ತೆಲಂಗಾಣ, ಗುಜರಾತ್, ಹರಿಯಾಣ, ಆಂಧ್ರಪ್ರದೇಶ ಸೇರಿದಂತೆ ಹಲವಾರು ರಾಜ್ಯದಿಂದ ಆಗಮಿಸುವ ಹಿನ್ನೆಲೆಯಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ರೈಲ್ವೇ ಇಲಾಖೆ ಚಿಂಚಲಿ ಗ್ರಾಮದಲ್ಲಿ ಕೆಲ ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಅಧಿಸೂಚನೆ ನೀಡಿದೆ.
ಮಾಯಕ್ಕಾ ದೇವಿ ಜಾತ್ರೆ: ಚಿಂಚಲಿ ಗ್ರಾಮದಲ್ಲಿ ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಸೂಚನೆ! - chinchali village fair
ಚಿಂಚಲಿ ಸುಪ್ರಸಿದ್ದ ಮಾಯಕ್ಕಾ ದೇವಿ ಜಾತ್ರಾ ಮಹೋತ್ಸವಕ್ಕೆ ಲಕ್ಷಾಂತರ ಭಕ್ತಾಧಿಗಳು ಆಗಮಿಸುವ ಹಿನ್ನೆಲೆ, ಭಕ್ತಾದಿಗಳ ಅನುಕೂಲಕ್ಕಾಗಿ ರೈಲ್ವೇ ಇಲಾಖೆ ಚಿಂಚಲಿ ಗ್ರಾಮದಲ್ಲಿ ಕೆಲ ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಅಧಿಸೂಚನೆ ನೀಡಿದೆ.
ಮಾಯಕ್ಕಾ ದೇವಿ ಜಾತ್ರೆ: ಚಿಂಚಲಿ ಗ್ರಾಮದಲ್ಲಿ ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಸೂಚನೆ!
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದ ಮಾಯಕ್ಕಾ ದೇವಿ ಜಾತ್ರೆ ಪ್ರಯುಕ್ತ ಫೆ.9 ರಿಂದ ಫೆ.18 ರವರೆಗೆ ಚಿಂಚಲಿ ಮಾರ್ಗವಾಗಿ ಸಂಚರಿಸುವ ಮಣಗೂರು - ಕೊಲ್ಲಾಪುರ ಎಕ್ಸ್‌ಪ್ರೆಸ್ (ನಂ.11303), ತಿರುಪತಿ - ಕೊಲ್ಲಾಪುರ ಎಕ್ಸ್‌ಪ್ರೆಸ್ (ನಂ.17415 ) ಹಾಗೂ ಕೊಲ್ಲಾಪುರ - ತಿರುಪತಿ ಎಕ್ಸ್‌ಪ್ರೆಸ್ (ನಂ.17416), ಕೊಲ್ಲಾಪುರ - ಮಣಗೂರು ಎಕ್ಸ್‌ಪ್ರೆಸ್ (ನಂ.11304) ರೈಲುಗಳಿಗೆ ಚಿಂಚಲಿ ರೈಲು ನಿಲ್ದಾಣದಲ್ಲಿ ತಾತ್ಕಾಲಿಕ ನಿಲುಗಡೆ ನೀಡಲಾಗಿದೆ ಎಂದು ರೈಲ್ವೇ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.