ಚಿಕ್ಕೋಡಿ:ಬಿಜೆಪಿ ಪಕ್ಷ ಸೇರಬೇಕು ಅಥವಾ ಬಿಜೆಪಿ ಆಡಳಿತಕ್ಕೆ ಬರಬೇಕು ಎಂದು ನಾವು ರಾಜೀನಾಮೆ ಕೊಟ್ಟಿಲ್ಲ ಎಂಬ ರಮೇಶ್ ಹೇಳಿಕೆಗೆ ಮಾಜಿ ಸಚಿವ ಆರ್.ಬಿ.ತಿಮ್ಮಾಪುರ ತಿರುಗೇಟು ನೀಡಿದ್ದಾರೆ.
ಆಗ ಕುದುರೆಯಂತೆ ಓಡಿದ್ದು ಯಾರು? ರಮೇಶ್ ಜಾರಕಿಹೊಳಿಗೆ ತಿಮ್ಮಾಪೂರ ತಿರುಗೇಟು - ಚಿಕ್ಕೋಡಿ
ರಮೇಶ್ ಜಾರಕಿಹೊಳಿ ಬಿಜೆಪಿ ಪಕ್ಷದ ಪರವಾಗಿ ನೀಡಿದ ಹೇಳಿಕೆ ಕುರಿತು ಆಕ್ರೋಶಗೊಂಡ ಮಾಜಿ ಸಚಿವ ಆರ್.ಬಿ.ತಿಮ್ಮಾಪುರ ತಿರುಗೇಟು ನೀಡಿದ್ದಾರೆ. ಬಿಜೆಪಿಗೆ ಸೇರದಿದ್ದರೆ ಕುದುರೆ ರೀತಿ ಯಾಕೆ ಓಡಿ ಹೋಗಿದ್ರೆಂದು ಪ್ರಶ್ನಿಸಿದ್ದಾರೆ.
ಆರ್.ಬಿ ತಿಮ್ಮಾಪುರ
ಬೆಳಗಾವಿ ಜಿಲ್ಲೆಯ ಹುಕ್ಕೇರಿಯ ಗುರುಶಾಂತೇಶ್ವರ ಮಠದ ದಸರಾ ಉತ್ಸವ ಚಾಲನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಗ ಕುದುರೆಯ ರೀತಿ ಓಡಿ ಹೋಗಿದ್ದು ಯಾರು? ವಿಶೇಷ ವಿಮಾನದಲ್ಲಿ ಸುತ್ತಿದ್ದು ಯಾರು ಎಂದು ಗೊತ್ತಿದೆ. ಬಾಂಬೆಯಲ್ಲಿ ಅವರು ಏನೇನು ಮಾಡಿದ್ರು ಎಂದು ಮಾಧ್ಯಮಗಳು ಬಿತ್ತರಿಸಿವೆ ಎಂದರು.
ಅವರು ಮಾಡಿರೋದನ್ನು ಗುಡಿಸಲಲ್ಲಿ ಬದುಕುವ ಕಟ್ಟ ಕಡೆಯ ವ್ಯಕ್ತಿಯೂ ಸಹ ನೋಡಿದ್ದಾನೆ. ಅದಕ್ಕಾಗಿ ನಾನು ಮಾಧ್ಯಮದ ಬಳಿ ಮತ್ತೊಮ್ಮೆ ಮನವಿ ಮಾಡುತ್ತೇನೆ. ಅವೆಲ್ಲವನ್ನು ಮತ್ತೊಮ್ಮೆ ಜನತೆಗೆ ತೋರಿಸಿ ಎಂದು ತಿಮ್ಮಾಪುರ ಹೇಳಿದರು.