ಅಥಣಿ: ನಗರದಿಂದ ಮೀರಜ್‌ಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ವಿಭಜಕದ ಮೇಲೆ ಬೆಳೆದಿದ್ದ ಹುಲ್ಲು, ಕಸ, ಕಡ್ಡಿಗಳನ್ನು ಗುತ್ತಿಗೆದಾರ ರಾಜು ಆಲಬಾಳ ಅವರು ಕಾರ್ಮಿಕರ ಸಹಾಯದಿಂದ ತೆರವುಗೊಳಿಸಿ ವಿಭಜಕವನ್ನು ಸ್ವಚ್ಛಗೊಳಿಸಿದರು.
ಅಥಣಿ: ರಾಜ್ಯ ಹೆದ್ದಾರಿ ರಸ್ತೆ ವಿಭಜಕದ ಸ್ವಚ್ಚತಾ ಕಾರ್ಯ ಆರಂಭ
'ರಸ್ತೆ ವಿಭಜಕಗಳ ನಡುವೆ ಬೆಳೆದ ಹುಲ್ಲುಗಳು ಲಕ್ಷ್ಮಣ ಸವದಿ ಸ್ವ ಕ್ಷೇತ್ರದ ಅಂದಕ್ಕೆ ಕುತ್ತು 'ಎಂಬ ಶೀರ್ಷಿಕೆಯಡಿ ಈಟಿವಿ ಭಾರತ ವರದಿ ಬಿತ್ತರಿಸುತ್ತಿದ್ದಂತೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.
ರಸ್ತೆ ವಿಭಜಕದ ಸ್ವಚ್ಚತಾ ಕಾರ್ಯ
ಈ ಕುರಿತು ಮಾತನಾಡಿದ ರಾಜು, ಮಳೆಗಾಲದ ವೇಳೆ ಆಲಬಾಳದಲ್ಲಿ ಕಸ ಬೆಳೆಯುವುದು ಸಹಜ. ಈ ಬಾರಿ ಕೊರೊನಾದಿಂದಾಗಿ ಕಸ ತೆಗೆಯುವುದು ಸ್ವಲ್ಪ ತಡವಾಗಿತ್ತು. ಈ ಕುರಿತು ಈಟಿವಿ ಭಾರತದಲ್ಲಿ ಪ್ರಕಟವಾದ ವರದಿಯನ್ನು ನೋಡಿ ಕಾರ್ಯೋನ್ಮುಖರಾಗಿ ಮೂರು ದಿನದಿಂದ ಸ್ವಚ್ಛ ಮಾಡುತ್ತಿದ್ದೇವೆ. ವರದಿ ಮೂಲಕ ನಮ್ಮನ್ನು ಎಚ್ಚರಿಸಿದ ಈಟಿವಿ ಭಾರತಕ್ಕೆ ಧನ್ಯವಾದ ಎಂದರು.