ಚಿಕ್ಕೋಡಿ: ಕಳೆದೆರಡು ದಿನಗಳ ಹಿಂದೆ "ರಾಜ್ಯದ ಗ್ರಾಪಂ ಚುನಾವಣೆಯಲ್ಲಿ ಗೆಲುವು: ಆದರೆ ಫ್ಲೆಕ್ಸ್ ಮಾತ್ರ ಮರಾಠಿಯದ್ದು" ಎಂಬ ಶೀರ್ಷಿಕೆಯಡಿ ಈಟಿವಿ ಭಾರತ ಸುದ್ದಿ ಬಿತ್ತರಿಸಿದ ಹಿನ್ನೆಲೆಯಲ್ಲಿ ಎಚ್ವೆತ್ತ ಗ್ರಾಮಸ್ಥರು ಮರಾಠಿ ಬೋರ್ಡ್ಗಳ ಬದಲಾಗಿ ಗ್ರಾಪಂ ಚುನಾವಣೆಯಲ್ಲಿ ವಿಜಯ ಸಾಧಿಸಿದ ಅಭ್ಯರ್ಥಿಗಳಿಗೆ ಅಭಿನಂದನೆಯನ್ನು ಕನ್ನಡದಲ್ಲಿ ಬರೆದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಹಾಕಿದ್ದಾರೆ.
ಈಟಿವಿ ಭಾರತ ಫಲಶೃತಿ: ಮರಾಠಿ ಫ್ಲೆಕ್ಸ್ಗಳು ಈಗ ಕನ್ನಡಮಯ - ETV Bharath Impact
ಈಟಿವಿ ಭಾರತ ಸುದ್ದಿ ಪ್ರಸಾರ ಮಾಡಿದ ಹಿನ್ನೆಲೆ ಎಚ್ಚೆತ್ತುಕೊಂಡು ಮರಾಠಿ ಭಾಷಿಕರು ಮರಾಠಿ ಭಾಷೆಯ ಫ್ಲೆಕ್ಸ್ಗಳನ್ನು ತೆರವುಗೊಳಿಸಿ ಕನ್ನಡ ಭಾಷೆಯಲ್ಲಿ ಫ್ಲೆಕ್ಸ್ಗಳನ್ನು ಅಳವಡಿಸಿದ್ದಾರೆ.
ಈಟಿವಿ ಭಾರತ ಫಲಶೃತಿ: ಮರಾಠಿ ಫ್ಲೆಕ್ಸ್ಗಳು ಈಗ ಕನ್ನಡಮಯ
ಓದಿ:ರಾಜ್ಯದ ಗ್ರಾಪಂ ಚುನಾವಣೆಯಲ್ಲಿ ಗೆಲುವು: ಆದರೆ ಫ್ಲೆಕ್ಸ್ ಮಾತ್ರ ಮರಾಠಿಯದ್ದು!
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ಇತ್ತೀಚೆಗೆ ಬೃಹತ್ ಪ್ರಮಾಣದಲ್ಲಿ ಮರಾಠಿ ಭಾಷೆಯಲ್ಲಿ ಫ್ಲೆಕ್ಸ್ಗಳನ್ನು ಹಾಕಲಾಗಿತ್ತು. ಈ ಫ್ಲೆಕ್ಸ್ಗಳ ಬಗ್ಗೆ ಈಟಿವಿ ಭಾರತ ಸುದ್ದಿ ಪ್ರಸಾರ ಮಾಡಿದ ಹಿನ್ನೆಲೆ ಎಚ್ಚೆತ್ತುಕೊಂಡು ಮರಾಠಿ ಭಾಷಿಕರು ಮರಾಠಿ ಭಾಷೆಯ ಫ್ಲೆಕ್ಸ್ಗಳನ್ನು ತೆರವುಗೊಳಿಸಿ ಕನ್ನಡ ಭಾಷೆಯಲ್ಲಿ ಫ್ಲೆಕ್ಸ್ಗಳನ್ನು ಅಳವಡಿಸಿದ್ದಾರೆ.