ಕರ್ನಾಟಕ

karnataka

ETV Bharat / state

ತುಂಬಿ ಹರಿಯುತ್ತಿರುವ ನದಿ: ಜೀವ ಭಯವಿಲ್ಲದೇ ಸ್ಥಳೀಯರ ಮೋಜು ಮಸ್ತಿ - ಬೆಳಗಾವಿಯಲ್ಲಿ ಭಾರಿ ಮಳೆ

ಬೆಳಗಾವಿ ಜಿಲ್ಲೆ ಮತ್ತು ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಮಾರ್ಕಂಡೇಯ ನದಿ ತುಂಬಿ ಹರಿಯುತ್ತಿದೆ. ಆದರೆ ಜನ ಮಾತ್ರ ಜೀವ ಭಯವಿಲ್ಲದೇ ನದಿ ಬಳಿ ತೆರಳಿ ಮೋಜು​​​ ಮಾಡುತ್ತಿದ್ದಾರೆ.

fdff
ಜೀವ ಭಯವಿಲ್ಲದೆ ಸ್ಥಳೀಯರ ಮೋಜು ಮಸ್ತಿ

By

Published : Aug 7, 2020, 1:50 PM IST

ಬೆಳಗಾವಿ: ಮಾರ್ಕಂಡೇಯ ನದಿ ಅಪಾಯದ ಮಟ್ಟವನ್ನೂ ಮೀರಿ ಹರಿಯುತ್ತಿದ್ದರೂ ಅಂಬೇವಾಡಿ ಗ್ರಾಮಸ್ಥರು ಮಾತ್ರ ಹರಿಯುವ ನೀರಿನಲ್ಲಿ ಜೀವಭಯವಿಲ್ಲದೇ ಮೋಜು- ‌ಮಸ್ತಿ ಮಾಡುತ್ತಿದ್ದಾರೆ.

ಜೀವ ಭಯವಿಲ್ಲದೇ ಸ್ಥಳೀಯರ ಮೋಜು ಮಸ್ತಿ

ಅಂಬೇವಾಡಿ ಗ್ರಾಮದ ಬಳಿ ಮಾರ್ಕಂಡೇಯ ನದಿ ಒಳಹರಿವು ಹೆಚ್ಚಾದ ಪರಿಣಾಮ ಅಂಬೇವಾಡಿ- ಹಿಂಡಲಗಾ ಗ್ರಾಮಕ್ಕೆ ಸಂಪರ್ಕ ಒದಗಿಸುವ ರಸ್ತೆ ಜಲಾವೃತವಾಗಿದೆ. ಆದ್ರೆ, ಅಲ್ಲಿನ‌ ಗ್ರಾಮಸ್ಥರು, ಬೈಕ್ ಸವಾರರು ಮಾತ್ರ ಜಲಾವೃತವಾದ ರಸ್ತೆಯ ಮೇಲೆ ಓಡಾಡುತ್ತಿದ್ದಾರೆ. ಜೊತೆಗೆ ಪೋಷಕರು ಪುಟ್ಟಪುಟ್ಟ ಮಕ್ಕಳನ್ನು ಕರೆದುಕೊಂಡು ನದಿ ದಡದಲ್ಲಿ ಬಂದು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ.

ಇನ್ನು ಅಪಾಯವನ್ನು ಲೆಕ್ಕಿಸದೇ ಹರಿಯುವ ನೀರಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ ಗ್ರಾಮಸ್ಥರು ಹೋಗುವುದನ್ನು ತಡೆಯಲು ಬ್ಯಾರಿಕೇಡ್ ಹಾಕಿ‌ ರಸ್ತೆ ಬಂದ್ ಮಾಡಿ ಮುಂದಾಗುವ ಅಪಾಯವನ್ನು ಜಿಲ್ಲಾಡಳಿತ ತಪ್ಪಿಸಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ABOUT THE AUTHOR

...view details