ಕರ್ನಾಟಕ

karnataka

ETV Bharat / state

ಆನೆ ‌ದಂತ ಮಾರಾಟಕ್ಕೆ ಯತ್ನ : ಇಬ್ಬರ ಬಂಧನ - elephant ivory sale in Hosvantamuri Village of Begavi

ಆನೆ ದಂತ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಬೆಳಗಾವಿಯ ಹೊಸವಂಟಮುರಿ ಗ್ರಾಮದ ಬಳಿ ಬಂಧಿಸಲಾಗಿದೆ

elephant ivory sale two arrested in Belgavi
ಬೆಳಗಾವಿಯಲ್ಲಿ ಆನೆ ‌ದಂತ ಮಾರಾಟಕ್ಕೆ ಯತ್ನಿಸಿದವರ ಬಂಧನ

By

Published : Nov 8, 2020, 2:35 PM IST

ಬೆಳಗಾವಿ :ಆನೆ ದಂತ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

ಹುಕ್ಕೇರಿ ತಾಲೂಕಿನ ಗುಟಗುದ್ದಿಯ ಲಗಮಪ್ಪಾ ನಾಯಿಕ (29), ಮಾರ್ಕಂಡೇಯ ನಗರದ ಮಲ್ಲಪ್ಪಾ ದೋಳಪ್ಪಗೋಳ (28) ಬಂಧಿತ ಆರೋಪಿಗಳು. ಬಂಧಿತರಿಂದ 7 ಆನೆ ದಂತ, ಸಾಗಾಟಕ್ಕೆ ಬಳಸುತ್ತಿದ್ದ ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು 7 ಆನೆ ದಂತಗಳನ್ನು ತಂದು ತಾಲೂಕಿನ ಹೊಸವಂಟಮುರಿ ಗ್ರಾಮದ ಬಳಿ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ವೇಳೆ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ ಬೆಳಗಾವಿ ಅರಣ್ಯ ಸಂಚಾರಿ ದಳದ ಪಿಎಸ್‌ಐ ರೋಹಿಣಿ ಪಾಟೀಲ ಮತ್ತು ಸಿಬ್ಬಂದಿ, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು‌ 4ನೇ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಆನೆ ದಂತಗಳನ್ನು ಎಲ್ಲಿಂದ ತಂದಿದ್ದರೂ ಎಂಬವುದರ ಬಗ್ಗೆ ಬೆಳಗಾವಿ ಉಪ ಅರಣ್ಯ ಇಲಾಖೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

For All Latest Updates

TAGGED:

ABOUT THE AUTHOR

...view details