ಹುಬ್ಬಳ್ಳಿ :ನಗರದಲ್ಲಿ ಚುನಾವಣಾ ಆಯೋಗ ಒಟ್ಟು ನಾಲ್ಕು ಸಖಿ ಮತಗಟ್ಟೆಗಳನ್ನ ತೆರೆಯಲಾಗಿದ್ದು, ತುರವಿಗಲ್ಲಿಯ ಸಖಿ ಮತಗಟ್ಟೆ ಮಾತ್ರ ವಿಶೇಷ ಹಾಗೂ ವಿನೂತವಾಗಿ ಕಂಡು ಬರುತ್ತಿದೆ.
ಮಹಿಳಾ ಮತದಾರರಿಗೆ ಚುನಾವಣಾ ಸಿಬ್ಬಂದಿಯಿಂದ ಸತ್ಕಾರ ಮತಗಟ್ಟೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ಶಾಲಾ ಸಿಬ್ಬಂದಿ ಮತಗಟ್ಟೆಯನ್ನು ವಿಶೇಷವಾಗಿ ಸಿಂಗರಿಸಿದ್ದಲ್ಲದೆ, ಮತದಾನ ಮಾಡಿದ ಮಹಿಳೆಯರಿಗೆ ಅರಿಶಿನ ಮತ್ತು ಕುಂಕುಮ ಹಚ್ಚಿ ಸತ್ಕರಿಸುತ್ತಿದ್ದಾರೆ.
ಅರಿಶಿನ ಹಾಗೂ ಕುಂಕುಮಕ್ಕೆ ಹಿಂದೂ ಸಂಪ್ರದಾಯದಲ್ಲಿ ಹೆಚ್ಚಿನ ಮಹತ್ವದ ಇದೆ. ಶುಭದ ಸಂಕೇತವಾಗಿ ಅರಿಶಿನ ಕುಂಕುಮ ನೀಡಲಾಗುತ್ತೆ. ಇದರಿಂದ ಮತದಾನ ಮಾಡಲು ಬಂದ ಮಹಿಳೆಯರು ಫುಲ್ ಖುಷಿಯಾಗಿದ್ದಾರೆ. ತಾಯಂದಿರ ಜೊತೆ ಬಂದ ಮಕ್ಕಳಿಗೆ ಆಟಿಕೆಗಳ ವ್ಯವಸ್ಥೆ ಮಾಡಿದ್ದು, ಕುಳಿತುಕೊಳ್ಳಲು ಚೇರ್ಗಳನ್ನೂ ಹಾಕಲಾಗಿದೆ.
ವಿಶೇಷ ಚೇತನರು-ವೃದ್ಧರ ನೆರವಿಗೆ ಬಂದ ಸ್ಕೌಟ್-ಗೈಡ್ಸ್ ಮಕ್ಕಳು ಇತ್ತ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ವಿಶೇಷ ಚೇತನರ ಸಹಾಯಕ್ಕೆ ನಿಂತಿದ್ದಾರೆ. ಹುಕ್ಕೇರಿ ತಾಲೂಕಿನ ಗುಡುಸ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ನಾಲ್ಕು ಮತಗಟ್ಟೆಯಲ್ಲಿ ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್ನ ಮಕ್ಕಳು ವಿಶೇಷ ಚೇತನರು ಮತ್ತು ವೃದ್ಧರನ್ನ ಗಾಲಿ ಕುರ್ಚಿಗಳಲ್ಲಿ ಕೂರಿಸಿಕೊಂಡು ಮತಗಟ್ಟೆಗೆ ಕರೆತರುತ್ತಿದ್ದು, ಮತದಾನ ಮಾಡಲು ನೆರವಾಗುತಿದ್ದಾರೆ.