ಕರ್ನಾಟಕ

karnataka

ETV Bharat / state

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ: ಚುನಾವಣಾ ವೀಕ್ಷಕರ ನಿಯೋಜನೆ - Election Time Table announce for 58 wards in belgavi

ಕೃಷಿ ಇಲಾಖೆಯ ಜಾಗೃತ ಕೋಶದ ಜಂಟಿ ನಿರ್ದೇಶಕ ಜಿಲಾನಿ ಮೊಕಾಶಿ ಅವರನ್ನು ವಾರ್ಡ್​ ಸಂಖ್ಯೆ 30 ರಿಂದ 58 ರವರೆಗೆ ಚುನಾವಣಾ ವೀಕ್ಷಕರನ್ನಾಗಿ ನಿಯೋಜಿಸಲಾಗಿದೆ..

Belgavi muncipality election
ಬೆಳಗಾವಿ ಮಹಾನಗರ ಪಾಲಿಕೆ

By

Published : Aug 24, 2021, 4:54 PM IST

ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆ 2021ರ ಕುರಿತು 58 ವಾರ್ಡ್​ಗಳಿಗೆ ಚುನಾವಣಾ ವೇಳಾ ಪಟ್ಟಿ ಪ್ರಕಟಿಸಲಾಗಿದೆ. ಅದರಂತೆ ಸೆಪ್ಟೆಂಬರ್ 3 ರಂದು ಮತದಾನ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಚುನಾವಣಾ ವೀಕ್ಷಕರನ್ನು ನಿಯೋಜಿಸಲಾಗಿದೆ. ಭೂ ಸ್ವಾಧೀನ ಬೃಹತ್ ನೀರಾವರಿ ಯೋಜನೆಗಳ ವಿಶೇಷ ಜಿಲ್ಲಾಧಿಕಾರಿ ಗೀತಾ ಕೌಲಗಿ ಅವರನ್ನು ವಾರ್ಡ್​ ಸಂಖ್ಯೆ 1 ರಿಂದ 29 ರವರೆಗೆ ಚುನಾವಣಾ ವೀಕ್ಷಕರನ್ನಾಗಿ ನಿಯೋಜಿಸಲಾಗಿದೆ.

ಕೃಷಿ ಇಲಾಖೆಯ ಜಾಗೃತ ಕೋಶದ ಜಂಟಿ ನಿರ್ದೇಶಕ ಜಿಲಾನಿ ಮೊಕಾಶಿ ಅವರನ್ನು ವಾರ್ಡ್​ ಸಂಖ್ಯೆ 30 ರಿಂದ 58 ರವರೆಗೆ ಚುನಾವಣಾ ವೀಕ್ಷಕರನ್ನಾಗಿ ನಿಯೋಜಿಸಿಲಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಜಿ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮತದಾನದ ಅವಧಿ ಒಂದು ಗಂಟೆ ವಿಸ್ತರಣೆ: ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆ ಸಮಯ ವಿಸ್ತರಣೆ ಮಾಡಲಾಗಿದೆ. ಮೊದಲು ಬೆಳಗ್ಗೆ 7ರಿಂದ ಸಂಜೆ 5ರವರೆಗೆ ನಿಗದಿಪಡಿಸಲಾಗಿತ್ತು.

ಆದರೆ, ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆ ಹಾಗೂ ವಿವಿಧ ಕಾರಣಗಳಿಂದ ತೆರವಾಗಿರುವ ರಾಯಬಾಗ ಪಟ್ಟಣ ಪಂಚಾಯಿತಿ ವಾರ್ಡ್​ ನಂ. 9 ಹಾಗೂ ಪುರಸಭೆ ಸವದತ್ತಿ ಯಲ್ಲಮ್ಮ ವಾರ್ಡ್​ ನಂ. 23 ರ ಮತದಾನದ ಸಮಯವನ್ನು ಚುನಾವಣೆ ಆಯೋಗ ಬೆಳಗ್ಗೆ 7 ರಿಂದ 6ರವರೆಗೆ ವಿಸ್ತರಿಸಿದೆ.

ಓದಿ:ಬೆಳಗಾವಿಯಲ್ಲಿ ಸಿಗುತ್ತಿಲ್ಲ 'ಪೊಸಕೊನಜೋಲ್' ಮಾತ್ರೆ: ಬ್ಲ್ಯಾಕ್ ಫಂಗಸ್ ಸೋಂಕಿತರ ಪರದಾಟ

ABOUT THE AUTHOR

...view details