ಕರ್ನಾಟಕ

karnataka

ETV Bharat / state

ಉಸಿರಾಟದ ತೊಂದರೆಯಿಂದ ವೃದ್ಧ ರಸ್ತೆಯಲ್ಲಿ ಒದ್ದಾಡಿದರೂ ನೆರವಿಗೆ ಬಾರದ ಬೆಳಗಾವಿ ಜನ.. - ಬೈಲಹೊಂಗಲ ತಹಶೀಲ್ದಾರ್

ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ವೃದ್ಧನೊಬ್ಬ ರಸ್ತೆಯಲ್ಲೇ ನರಳಾಡಿ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮೃತಪಟ್ಟಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ನಡೆದಿದೆ..

Elderly death in belagavi from respiratory problem
ಬೆಳಗಾವಿಯಲ್ಲಿ ವೃದ್ಧ ಸಾವು

By

Published : May 15, 2021, 11:04 PM IST

ಬೆಳಗಾವಿ: ಮಗಳೊಂದಿಗೆ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಲು ಆಸ್ಪತ್ರೆಗೆ ಆಗಮಿಸಿದ್ದ ವೃದ್ಧನೋರ್ವ ಆಕ್ಸಿಜನ್ ಸಮಸ್ಯೆಯಿಂದ ರಸ್ತೆಯಲ್ಲೇ ನರಳಾಡಿ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮೃತಪಟ್ಟಿರುವ ದಾರುಣ ಘಟನೆ ಬೈಲಹೊಂಗಲದಲ್ಲಿ ನಡೆದಿದೆ.

ಬೆಳಗಾವಿಯಲ್ಲಿ ವೃದ್ಧ ಸಾವು..

ತಾಲೂಕಿನ ನೇಸರಗಿ ಗ್ರಾಮದ ನಾಗಭೂಷಣ ಸಂಪಗಾಂವಿ ಎಂಬಾತ ಮೃತ ವೃದ್ಧ. ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಲು ಬಂದಾಗ ಉಸಿರಾಟದ ತೊಂದರೆ ಕಾಣಿಸಿಕೊಂಡು ನೆಲಕ್ಕೆ ಬಿದ್ದಿದ್ದಾರೆ.

ಈ ವೇಳೆ ಆತನ ಮಗಳು ಸ್ಥಳದಲ್ಲಿದ್ದ ಜನರ ಸಹಾಯ ಕೋರಿದ್ದಾಳೆ. ಆದರೆ, ಕೊರೊನಾ ಭಯಕ್ಕೆ ಅಂಜಿದ‌ ಜನ ವೃದ್ಧನ ಸಹಾಯಕ್ಕೆ ಬಂದಿಲ್ಲ. ಇದಾದ ಬಳಿಕ ಸರ್ಕಾರಿ ಆಸ್ಪತ್ರೆಯ ಆ್ಯಂಬುಲೆನ್ಸ್ ಹಾಗೂ ಸಂಬಂಧಿಕರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.

ಓದಿ:ಕೊರೊನಾ ಸಂಕಷ್ಟದಲ್ಲೂ ಡಬಲ್ ಆಫರ್​.. ಅಕ್ಕ-ತಂಗಿ ಇಬ್ಬರನ್ನೂ ವಿವಾಹವಾದ ವರ

ಆ್ಯಂಬುಲೆನ್ಸ್​ ಚಾಲಕ ಸಮಯಕ್ಕೆ ಸರಿಯಾಗಿ ಬರದೇ ಇರುವ ಕಾರಣ ವೃದ್ಧನೊಂದಿಗೆ ಮಗಳು ರಸ್ತೆಯಲ್ಲೇ ಅರ್ಧ ಗಂಟೆಯವರೆಗೂ ಕಳೆದಿದ್ದಾರೆ. ಬಳಿಕ ಮೃತನ ಕುಟುಂಬಸ್ಥರೇ ಆಗಮಿಸಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭದಲ್ಲಿ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆ.

ಇತ್ತ ಜೀವನ್ಮರಣ ನಡುವೆ ಹೋರಾಟ ನಡೆಸುತ್ತಿದ್ದ ವೃದ್ಧನ ಸಹಾಯಕ್ಕೆ ಯಾರೊಬ್ಬರು ಧಾವಿಸದೇ ಇರೋದು, ಕಿಲೋಮೀಟರ್ ಅಂತರದಲ್ಲೇ ಸರ್ಕಾರಿ ಆಸ್ಪತ್ರೆ, ಆ್ಯಂಬುಲೆನ್ಸ್ ಸೇವೆ ಇದ್ದರೂ ಅರ್ಧ ಗಂಟೆ ತಡವಾಗಿ ಆ್ಯಂಬುಲೆನ್ಸ್ ಬಂದಿದ್ದರಿಂದ ಆತ ಸಾವನ್ನಪ್ಪಿದ ಎನ್ನಲಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಬೈಲಹೊಂಗಲ ತಹಶೀಲ್ದಾರ್​ ಬಸವರಾಜ ನಾಗರಾಳ, ವೃದ್ಧನಿಗೆ ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಲಾಗಿದೆ. ರಸ್ತೆಯಲ್ಲಿ ಅವರು ಮೃತಪಟ್ಟಿಲ್ಲ. ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details