ಬೆಳಗಾವಿ:ರಾಜ್ಯಾದ್ಯಂತ ಪ್ರೌಢಶಾಲೆಗಳು ಆರಂಭವಾಗಿವೆ. ಈ ಹಿನ್ನೆಲೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಬೆಳಗಾವಿ ಜಿಲ್ಲೆ ಕಿತ್ತೂರು ಶಾಲೆಗೆ ದಿಢೀರ್ ಭೇಟಿ ನೀಡಿದರು.
ಪಟ್ಟಣದ ಬಿ.ಜಿ.ಹೈಸ್ಕೂಲ್‌ಗೆ ಭೇಟಿ ನೀಡಿದ ಸಚಿವ, ಶಾಲೆ ಆರಂಭಿಸಿರುವ ಬಗ್ಗೆ ವಿದ್ಯಾರ್ಥಿಗಳ ಜೊತೆ ಸಮಾಲೋಚನೆ ನಡೆಸಿದರು. ಈ ವೇಳೆ 'ಶಾಲೆ ನಡೆಯಬೇಕೋ? ಬೇಡವೋ?' ಎಂಬ ಸಚಿವರ ಪ್ರಶ್ನೆಗೆ ಮಕ್ಕಳು ನಡೆಯಬೇಕು ಸರ್ ಎಂದರು. ಶಾಲೆ ನಡೆಯಬೇಕಂದ್ರೆ ನೀವು ಏನು ಮಾಡಬೇಕೆಂದು ಸಚಿವರು ಮರು ಪ್ರಶ್ನೆ ಹಾಕಿದಾಗ, 'ಮಾಸ್ಕ್ ಸ್ಯಾನಿಟೈಸರ್ ಬಳಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು' ಅಂತಾ ವಿದ್ಯಾರ್ಥಿಗಳು ಉತ್ತರಿಸಿದರು.
ಬಳಿಕ ಕಿತ್ತೂರು ಸೈನಿಕ ಶಾಲೆ, ಕಾದ್ರೊಳ್ಳಿ ಗ್ರಾಮದ ಪ್ರೌಢಶಾಲೆಗೆ ಭೇಟಿ ನೀಡಿದ ಸಚಿವರು ಕೆಲಕಾ ಶಿಕ್ಷಕರು ಹಾಗೂ ಮಕ್ಕಳ ಜತೆ ಮಾತುಕತೆ ನಡೆಸಿದರು. ಸಚಿವರಿಗೆ ಕಿತ್ತೂರು ಬಿಜೆಪಿ ಶಾಸಕ ಮಹಾಂತೇಶ ದೊಡಗೌಡರ ಸಾಥ್ ನೀಡಿದರು.
ಎಲ್ಲ ಶಿಕ್ಷಕರಿಗೂ ಶೀಘ್ರವೇ ಲಸಿಕೆ
ಶಾಲೆಗಳಿಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಶೇ.85 ರಿಂದ 90 ರಷ್ಟು ಶಿಕ್ಷಕರಿಗೆ ಲಸಿಕೆ ನೀಡಲಾಗಿದೆ. ಉಳಿದ ಶೇ 10 ರಿಂದ 15 ರಷ್ಟು ಶಿಕ್ಷಕರಿಗೆ ಈ ತಿಂಗಳು ಲಸಿಕೆ ನೀಡಲಾಗುವುದು. ಲಸಿಕೆ ಪಡೆಯದ ಶಿಕ್ಷಕರು ಮಕ್ಕಳಿಗೆ ಪಾಠ ಮಾಡುವಂತಿಲ್ಲ ಎಂಬ ನಿಯಮ ಮಾಡಲಾಗಿದೆ.