ಕರ್ನಾಟಕ

karnataka

ETV Bharat / state

ಐಟಿ ಕ್ಷೇತ್ರದ ಅಭಿವೃದ್ಧಿಗೆ ಎಲ್ಲ ನೆರವು ನೀಡಲಾಗುವುದು: ಇ. ವಿ ರಮಣ ರೆಡ್ಡಿ ಅಭಯ - ಬೆಳಗಾವಿಯಲ್ಲಿ `ಸಿಇಓ'ಗಳ ದುಂಡುಮೇಜಿನ ಶೃಂಗಸಭೆ

ರಾಜ್ಯದ ವಿವಿಧೆಡೆ ಸಾಕಷ್ಟು ಜಮೀನು‌ ಲಭ್ಯವಿದ್ದು, ಐಟಿ/ಬಿಟಿ ಉದ್ಯಮದ ಬೆಳವಣಿಗೆಗೆ ಸರ್ಕಾರದಿಂದ ಅಗತ್ಯ ಜಮೀನು ಒದಗಿಸಲಾಗುವುದು. ಬೆಂಗಳೂರು ಹೊರತುಪಡಿಸಿ ರಾಜ್ಯದ ಇತರೆ ಭಾಗದಲ್ಲಿ ಐಟಿ ಕ್ಷೇತ್ರದ ಅಭಿವೃದ್ಧಿಗೆ ಪ್ರೋತ್ಸಾಹ ಒದಗಿಸಲಾಗುತ್ತದೆ ಎಂದು ವಿದ್ಯುನ್ಮಾನ ಮತ್ತು ಐಟಿ, ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ. ವಿ ರಮಣ ರೆಡ್ಡಿ ಭರವಸೆ ನೀಡಿದರು.

e-v-ramana-reddy
ಇ. ವಿ ರಮಣ ರೆಡ್ಡಿ

By

Published : Jan 5, 2022, 9:38 PM IST

ಬೆಳಗಾವಿ: ಕುಂದಾನಗರಿಯಲ್ಲಿ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಿದ್ದು, ಐಟಿ ಉದ್ಯಮದ ಬೆಳವಣಿಗೆಗೆ ಇದು ಪೂರಕವಾಗಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಎಲ್ಲ ಅಗತ್ಯ ವ್ಯವಸ್ಥೆಯನ್ನು ಒದಗಿಸಲಿದೆ ಎಂದು ವಿದ್ಯುನ್ಮಾನ ಮತ್ತು ಐಟಿ, ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ. ವಿ ರಮಣ ರೆಡ್ಡಿ ಭರವಸೆ ನೀಡಿದರು.

ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆ-ಡಿಇಎಂ) `ಬಿಯಾಂಡ್ ಬೆಂಗಳೂರು’ ಉಪಕ್ರಮದ ಅಂಗವಾಗಿ ಇಲ್ಲಿನ ಖಾಸಗಿ ಹೋಟೆಲ್​ನಲ್ಲಿ ಏರ್ಪಡಿಸಿದ್ದ `ಸಿಇಓ'ಗಳ ದುಂಡುಮೇಜಿನ ಶೃಂಗಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧೆಡೆ ಸಾಕಷ್ಟು ಜಮೀನು‌ ಲಭ್ಯವಿದ್ದು, ಐಟಿ/ಬಿಟಿ ಉದ್ಯಮದ ಬೆಳವಣಿಗೆಗೆ ಸರ್ಕಾರದಿಂದ ಅಗತ್ಯ ಜಮೀನು ಒದಗಿಸಲಾಗುವುದು. ಬೆಂಗಳೂರು ಹೊರತುಪಡಿಸಿ ರಾಜ್ಯದ ಇತರೆ ಭಾಗದಲ್ಲಿ ಐಟಿ ಕ್ಷೇತ್ರದ ಅಭಿವೃದ್ಧಿಗೆ ಪ್ರೋತ್ಸಾಹ ಒದಗಿಸಲಾಗುತ್ತದೆ ಎಂದರು.

ಕೇಂದ್ರ ಸರ್ಕಾರದ ‌ಮಾದರಿಯಲ್ಲಿ ಸಹಾಯ ಹಾಗೂ ಪ್ರೋತ್ಸಾಹ ಧನವನ್ನು ಒದಗಿಸಲಾಗುತ್ತಿದೆ. ಇದನ್ನು ‌ಬಳಸಿಕೊಂಡು ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ರಾಜ್ಯದ ಇತರೆ ಭಾಗಗಳಲ್ಲಿ ಐಟಿ ಉದ್ಯಮ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಧಾರವಾಡದ ಬೇಲೂರು ಪ್ರದೇಶದಲ್ಲಿ ಕ್ಲಸ್ಟರ್ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ. ಇನ್ನೆರಡು ತಿಂಗಳಲ್ಲಿ ಅಂತಿಮಗೊಳಿಸಲಾಗುವುದು ಎಂದು ರಮಣ ರೆಡ್ಡಿ ತಿಳಿಸಿದರು.

ಐಟಿ/ಬಿಟಿ ನಿರ್ದೇಶಕ ಮೀನಾ ನಾಗರಾಜ್, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಚೇರ್ಮನ್ ನಾಯ್ಡು, ಟಿಸಿಎಸ್ ರಾಜ್ಯ ವಿಭಾಗದ ಮುಖ್ಯಸ್ಥ ಸುನೀಲ್​​ ದೇಶಪಾಂಡೆ, ಜಿಲ್ಲಾಧಿಕಾರಿ ಎಂ. ಜಿ ಹಿರೇಮಠ ಹಾಗು ಐಟಿ/ಬಿಟಿ ಕ್ಷೇತ್ರದ ಉದ್ಯಮಿಗಳು, ಪ್ರಮುಖ ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಓದಿ:ದೇಶದ ಆಧಾರಸ್ತಂಭ ಕೃಷಿ ಕ್ಷೇತ್ರದ ಜನರ ಭವಿಷ್ಯ ಉತ್ತಮವಾಗಿರಬೇಕು: ಸಚಿವ ಅಶ್ವತ್ಥನಾರಾಯಣ

ABOUT THE AUTHOR

...view details