ಕರ್ನಾಟಕ

karnataka

ETV Bharat / state

ಕುಡಚಿ ಪಟ್ಟಣದಲ್ಲಿ ಸೀಲ್‌ಡೌನ್​ ಉಲ್ಲಂಘಿಸಿದ್ರೆ ಕಾನೂನು ಕ್ರಮ- ಡಿವೈಎಸ್‌ಪಿ ಎಚ್ಚರಿಕೆ - latest chikkodi, kuduchi news

ಕುಡಚಿ ಪಟ್ಟಣ 3 ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ನಿಷೇಧಿತ (ಕಂಟೈನ್ಮೆಂಟ್​ ಝೋನ್​) ಪ್ರದೇಶ ಮತ್ತು ನಿಷೇಧಿತ ಪ್ರದೇಶದಿಂದ ಹೂರಗಿನ 2 ಕಿಮೀ ಪ್ರದೇಶವನ್ನು ಬಫರ್​ ಝೋನ್​ ಎಂದು ಘೋಷಿಸಿದ್ದರಿಂದ ಜನ ರಸ್ತೆಗಿಳಿಯಬಾರದೆಂದು ಕರೆ ನೀಡಿದರು.

DYSP Girish
ಕುಡಚಿ ಪಟ್ಟಣ ಸೀಲ್​ ಡೌನ್​

By

Published : Apr 13, 2020, 12:36 PM IST

ಚಿಕ್ಕೋಡಿ :ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಕೊರೊನಾ ಸೋಂಕು ದೃಢಪಟ್ಟವರ ಸಂಖೈ ಏಳು ಮಂದಿ ಇರುವುದರಿಂದ ಕುಡಚಿ ಪಟ್ಟಣದಲ್ಲಿ ಕಟ್ಟೆಚ್ಚರವಹಿಸಲಾಗಿದೆ ಎಂದು ಡಿವೈಎಸ್​ಪಿ ಎಸ್ ವಿ ಗಿರೀಶ್ ಹೇಳಿದ್ದಾರೆ.​

ಪಟ್ಟಣದಲ್ಲಿ ಲಾಕ್‌ಡೌನ್ ಇದ್ದರೂ ಕೂಡ ಜನ ಸಾಮಾಜಿಕ ಅಂತರ ಕಾಯ್ದುಕೂಳ್ಳದೆ ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಹೈಅಲಟ್೯ ಘೋಷಿಸಿ ಡ್ರೋನ್ ಕ್ಯಾಮೆರಾದ ಮೂಲಕ ಹದ್ದಿನ ಕಣ್ಣಿಡಲಾಗಿದೆ. ಕುಡಚಿ ಪಟ್ಟಣದಲ್ಲಿ ನಾಲ್ಕು ಕೊರೊನಾ ಪ್ರಕರಣಗಳ ಜೊತೆಗೆ ಮತ್ತೆ ಮೂರು ಹೊಸ ಪ್ರಕರಣ ಸೇರಿರುವ ಹಿನ್ನೆಲೆಯಿಂದ ಪಟ್ಟಣವನ್ನು ಸಂಪೂರ್ಣ ಸೀಲ್‌ಡೌನ್​ ಮಾಡಲಾಗಿದೆ. ಆದರೂ ಕೂಡ ಕೆಲವೆಡೆ ಜನ ಹೂರಗೆ ತಿರುಗಾಡುತ್ತಿರುವುದು ಡ್ರೋನ್ ಕ್ಯಾಮೆರಾದಲ್ಲಿ ಕಂಡು ಬಂದಿದೆ. ಅಂಥವರ ಮೇಲೆ ಕಾನೂನು ಕ್ರಮ ಜರಗಿಸಲಾಗುವುದು ಎಂದರು.

ಕುಡಚಿ ಪಟ್ಟಣ ಸೀಲ್‌ಡೌನ್..​

ಕುಡಚಿ ಪಟ್ಟಣ 3 ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ನಿಷೇಧಿತ (ಕಂಟೈನ್ಮೆಂಟ್​ ಝೋನ್​) ಪ್ರದೇಶ ಮತ್ತು ನಿಷೇಧಿತ ಪ್ರದೇಶದಿಂದ ಹೂರಗಿನ 2 ಕಿಮೀ ಪ್ರದೇಶವನ್ನು ಬಫರ್​ ಝೋನ್​ ಎಂದು ಘೋಷಿಸಿದ್ದರಿಂದ ಜನ ರಸ್ತೆಗಿಳಿಯಬಾರದೆಂದು ಕರೆ ನೀಡಿದರು.

ಜನರಿಗೆ ತೊಂದರೆಯಾಗಬಾರದೆಂದು ಪಟ್ಟಣದ 23 ವಾರ್ಡ್​ಗಳಲ್ಲಿ ಪ್ರತಿ ವಾರ್ಡಿಗೆ 20 ಸ್ವಯಂ ಸೇವಕರನ್ನ ನೇಮಿಸಿ ಅವರ ಮುಖಾಂತರ ಜನರಿಗೆ ವಾರದಲ್ಲಿ 2 ದಿನ ಅಗತ್ಯ ದಿನಸಿ ವಸ್ತುಗಳನ್ನು ತಲುಪಿಸುವ ಕಾರ್ಯ ರೂಪಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ABOUT THE AUTHOR

...view details