ಚಿಕ್ಕೋಡಿ:ಪಶ್ಚಿಮ ಘಟ್ಟ ಪ್ರದೇಶ ಹಾಗೂ ಚಿಕ್ಕೋಡಿ ಉಪವಿಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ದೂಧಗಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಉಕ್ಕಿ ಹರಿಯುತ್ತಿದೆ ದೂಧಗಂಗಾ: ಯಕ್ಸಂಬಾ-ದನವಾಡ ಸೇತುವೆ ಮೇಲೆ ನೀರು - River Dudhganga
ಚಿಕ್ಕೋಡಿಯ ಯಕ್ಸಂಬಾ-ದನವಾಡ ಗ್ರಾಮಗಳ ನಡುವಿನ ಸೇತುವೆ ಮೇಲೆ ಒಂದು ಅಡಿಗೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿದೆ.
ದೂಧಗಂಗಾ ನದಿ
ತಾಲೂಕಿನ ಯಕ್ಸಂಬಾ-ದನವಾಡ ಗ್ರಾಮಗಳ ನಡುವಿನ ಸೇತುವೆ ಜಲಾವೃತಗೊಂಡಿದೆ. ಸೇತುವೆ ಮೇಲೆ ಮಳೆ ನೀರು ಹರಿಯುತ್ತಿದೆ. ಆದರೆ, ತಾಲೂಕಾಡಳಿತದ ಅಧಿಕಾರಿಗಳು ಸಂಚಾರ ನಿರ್ಬಂಧ ಹೇರದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.