ಕರ್ನಾಟಕ

karnataka

ETV Bharat / state

ಬೆಳಗಾವಿಯಲ್ಲಿ ನಾಳೆ ಮೂರು ಕಡೆ ಕೋವಿಡ್‌ ಲಸಿಕೆ ಡ್ರೈರನ್ - Belgaum Dryrun news

ಬೆಳಗಾವಿ ನಗರದ ವಂಟಮುರಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ, ಕಿತ್ತೂರು ಸಮುದಾಯ ಆರೋಗ್ಯ ಕೇಂದ್ರ, ಹುಕ್ಕೇರಿ ತಾಲೂಕು ಆಸ್ಪತ್ರೆಯಲ್ಲಿ ನಾಳೆ ಡ್ರೈ ರನ್ ನಡೆಯಲಿದೆ.

ಬೆಳಗಾವಿಯಲ್ಲಿ ನಾಳೆ ಮೂರು ಕಡೆ ಡ್ರೈರನ್
ಬೆಳಗಾವಿಯಲ್ಲಿ ನಾಳೆ ಮೂರು ಕಡೆ ಡ್ರೈರನ್

By

Published : Jan 1, 2021, 6:28 PM IST

Updated : Jan 1, 2021, 7:09 PM IST

ಬೆಳಗಾವಿ: ಕುಂದಾನಗರಿಯ ಮೂರು ಕಡೆ ನಾಳೆ ಕೊರೊನಾ ಲಸಿಕೆಯ ಡ್ರೈರನ್ ನಡೆಯಲಿದ್ದು, ಆರೋಗ್ಯ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.

ಬೆಳಗಾವಿ ನಗರದ ವಂಟಮುರಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ, ಕಿತ್ತೂರು ಸಮುದಾಯ ಆರೋಗ್ಯ ಕೇಂದ್ರ, ಹುಕ್ಕೇರಿ ತಾಲೂಕು ಆಸ್ಪತ್ರೆಯಲ್ಲಿ ಡ್ರೈ ರನ್ ನಡೆಯಲಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಳಗಾವಿಯ ವಂಟಮೂರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೇಟಿಂಗ್ ರೂಮ್, ಆನ್‌ಲೈನ್ ನೋಂದಣಿ ವಿಭಾಗ, ಲಸಿಕಾ ಕೊಠಡಿ, ಪರಿವೀಕ್ಷಣಾ ಕೊಠಡಿ, ಎಐಎಫ್‌ಐ ವಿಭಾಗ ಸ್ಥಾಪನೆ ಮಾಡಲಾಗಿದೆ.

ಬೆಳಗಾವಿಯಲ್ಲಿ ನಾಳೆ ಮೂರು ಕಡೆ ಕೋವಿಡ್‌ ಲಸಿಕೆ ಡ್ರೈರನ್

ಒಂದು ಗಂಟೆಗೆ ಕೇವಲ 10 ಜನರಿಗೆ ವ್ಯಾಕ್ಸಿನೇಷನ್ ತಾಲೀಮು ನಡೆಸಲು ನಿರ್ಧರಿಸಲಾಗಿದ್ದು, ಮೂರು ಕಡೆ ತಲಾ 25 ಕೊರೊನಾ ವಾರಿಯರ್ಸ್‌ರನ್ನು ಡ್ರೈ ರನ್​ಗೆ ಆಯ್ಕೆ ಮಾಡಲಾಗಿದೆ. ಲಸಿಕೆ ಪಡೆದ ನಂತ್ರ ಕೆಲವರಿಗೆ ಸೈಡ್ ಎಫೆಕ್ಟ್ ಆಗುವ ಸಾಧ್ಯತೆ ಹೆಚ್ಚು. ಈ ಕಾರಣಕ್ಕೆ ನಾಳೆ ನಡೆಯುವ ತಾಲೀಮಿನಲ್ಲಿ ಪ್ರತಿಯೊಬ್ಬರಿಗೂ 30 ನಿಮಿಷ ನಿಗಾ ಇಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಓದಿ: ನಾಳೆಯಿಂದ ರಾಜ್ಯದ 5 ಜಿಲ್ಲೆಗಳಲ್ಲಿ ಕೊರೊನಾ ವ್ಯಾಕ್ಸಿನ್ ಡ್ರೈ ರನ್ ಆರಂಭ

ಎಐಎಫ್‌ಐ ವಿಭಾಗವೂ ಸ್ಥಾಪನೆ ಮಾಡಲಾಗಿದ್ದು, ಇಲ್ಲಿ ಇಬ್ಬರು ವೈದ್ಯರು ಹಾಗೂ ಇಬ್ಬರು ಸ್ಟಾಫ್ ನರ್ಸ್​ಗಳನ್ನು ನಿಯೋಜಿಸಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ನಾಳೆ ನಡೆಯಲಿರುವ ಡ್ರೈ ರನ್‌ಗೆ ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಡ್ರೈರನ್​ನಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರಿಗೆ ಮಾಸ್ಕ್ ಧರಿಸುವುದು, ಆಧಾರ್​ ಕಾರ್ಡ್ ತರುವುದು ಕಡ್ಡಾಯಗೊಳಿಸಲಾಗಿದೆ‌. ಡ್ರೈರ್​ನಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರ ಹೆಸರನ್ನು ಕೋವಿಡ್ ಪೋರ್ಟಲ್​ನಲ್ಲಿ ನೋಂದಾಯಿಸಲಾಗುತ್ತಿದೆ ಎಂದು ಬೆಳಗಾವಿ ತಾಲೂಕು ವೈದ್ಯಾಧಿಕಾರಿ ಡಾ. ಸಂಜಯ್ ಡುಮ್ಮಗೋಳ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

Last Updated : Jan 1, 2021, 7:09 PM IST

ABOUT THE AUTHOR

...view details