ಬೆಳಗಾವಿ :ಡ್ರೋನ್ಕ್ಯಾಮೆರಾ ಕಂಡು ಯುವಕರು ಚೆಲ್ಲಾಪಿಲ್ಲಿಯಾಗಿ ಓಡುತ್ತಿರುವ ದೃಶ್ಯ ಸೆರೆಯಾಗಿದೆ.
ಅನಗತ್ಯ ರಸ್ತೆಗಿಳಿಯುವವರ ಮೇಲೆ ಡ್ರೋನ್ ಕಣ್ಗಾವಲು.. ಕ್ಯಾಮೆರಾ ಕಂಡು ಯುವಕರು ಚೆಲ್ಲಾಪಿಲ್ಲಿ - ಬೆಳಗಾವಿ ಲೆಟೆಸ್ಟ್ ನ್ಯೂಸ್
ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಇಡೀ ದೇಶವೇ ಲಾಕ್‌ಡೌನ್ ಆಗಿದೆ. ಜಿಲ್ಲೆಯಲ್ಲೂ ಸೋಂಕಿತರ ಸಂಖ್ಯೆ 10ಕ್ಕೇರಿದೆ. ನಗರದಲ್ಲಿ ಈಗಾಗಲೇ ಕಟ್ಟೆಚ್ಚರವಹಿಸಲಾಗಿದೆ. ಲಾಕ್‌ಡೌನ್‌ನ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲು ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣೆ ಪೊಲೀಸರು ಡ್ರೋನ್ ಕ್ಯಾಮರಾ ಬಳಕೆ ಮಾಡುತ್ತಿದ್ದಾರೆ.

ಡ್ರೋನ್ ಕ್ಯಾಮೆರಾ ಕಂಡು ಯುವಕರು ಚೆಲ್ಲಾಪಿಲ್ಲಿಯಾಗಿ ಓಡುತ್ತಿರುವ ದೃಶ್ಯ ಸೆರೆಯಾಗಿದೆ. ಗುಂಪು-ಗುಂಪು ಓಡಾಡುವುದನ್ನು ತಪ್ಪಿಸಲು ಹೊಸ ಪ್ಲ್ಯಾನ್ ಮಾಡಲಾಗಿದೆ. ಯುವಕರ ಗುಂಪು ಕಂಡ ತಕ್ಷಣ ಸ್ಥಳಕ್ಕೆ ಬೀಟ್ ಪೊಲೀಸರನ್ನು ರವಾನಿಸಲಾಗುತ್ತಿದೆ. ಗಾಂಧಿನಗರ, ಉಜ್ವಲನಗರ ಸೇರಿ ಹಲವೆಡೆ ಡ್ರೋನ್ ಬಳಕೆ ಮಾಡಲಾಗಿದೆ.