ಬೆಳಗಾವಿ: ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ರಸ್ತೆಯಲ್ಲಿಯೇ ಬಿದ್ದು ನರಳಾಡುತ್ತಿದ್ದ ವ್ಯಕ್ತಿಯನ್ನು ಉಪಚರಿಸಿ ಆಸ್ಪತ್ರೆಗೆ ಸೇರಿಸುವ ಮೂಲಕ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಮಾನವೀಯತೆ ಮೆರೆದಿದ್ದಾರೆ.
ಬೆಳಗಾವಿ: ಗಾಯಗೊಂಡ ವ್ಯಕ್ತಿಯನ್ನು ಉಪಚರಿಸಿದ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್... - Bike accident in Kasaba,
ರಸ್ತೆಯ ಬದಿ ಬಿದ್ದು ನರಳಾಡುತ್ತಿದ್ದ ವ್ಯಕ್ತಿಯನ್ನು ಉಪಚರಿಸಿ ಆಸ್ಪತ್ರೆಗೆ ರವಾನಿಸಿರುವ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
![ಬೆಳಗಾವಿ: ಗಾಯಗೊಂಡ ವ್ಯಕ್ತಿಯನ್ನು ಉಪಚರಿಸಿದ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್... Dr. Anjali Nimbalkar treated the injured person](https://etvbharatimages.akamaized.net/etvbharat/prod-images/768-512-9299295-621-9299295-1603546199436.jpg)
ಖಾನಾಪೂರ ತಾಲೂಕಿನ ಕಸಬಾ ನಂದಗಡ ಕ್ರಾಸ್ ಬಳಿ ರಸ್ತೆಯಲ್ಲಿ ನಡೆದು ಸಾಗುತ್ತಿದ್ದ ಹಲಸಿ ಗ್ರಾಮದ ಮಹಾರುದ್ರಯ್ಯ ಮಾದಾರ (58) ಎಂಬಾತನ ಮೇಲೆ ಅಪರಿಚಿತ ದ್ವಿಚಕ್ರ ವಾಹನ ಸವಾರನೊಬ್ಬ ಹಿಂದಿನಿಂದ ಗುದ್ದಿಕೊಂಡು ಎಸ್ಕೇಪ್ ಆಗಿದ್ದಾನೆ.
ಬೈಕ್ ಸವಾರನಿಂದ ಗುದ್ದಿಸಿಕೊಂಡ ವ್ಯಕ್ತಿಗೆ ಸಣ್ಣಪುಟ್ಟ ಗಾಯವಾಗಿ ರಸ್ತೆ ಬದಿಯಲ್ಲಿ ನರಳಾಡುತ್ತಿದ್ದ.ಈ ವೇಳೆ ಅದೇ ಮಾರ್ಗವಾಗಿ ಸಂಚರಿಸುತ್ತಿದ್ದ ಖಾನಾಪೂರ ಶಾಸಕಿ ಅಂಜಲಿ ನಿಂಬಾಳ್ಕರ್, ಗುಂಪು ಸೇರಿದ ಜನರನ್ನು ನೋಡಿ ಕಾರು ನಿಲ್ಲಿಸಿದ್ದಾರೆ. ನಂತರ ಗಾಯಗೊಂಡ ವ್ಯಕ್ತಿಯನ್ನ ಉಪಚರಿಸಿರುವ ಅವರು, ಆಂಬ್ಯುಲೆನ್ಸ್ಗೆ ಕರೆ ಮಾಡಿ ಖಾನಾಪೂರ ತಾಲೂಕಾಸ್ಪತ್ರೆಗೆ ರವಾನಿಸಿದರು. ಇವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.