ಬೆಳಗಾವಿ:ಮಾರಕಾಸ್ತ್ರಗಳಿಂದ ಕೊಚ್ಚಿ ಇಬ್ಬರು ರೌಡಿಗಳನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಸುಳೇಭಾವಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಹೇಶ್ ಮುರಾರಿ (28) ಹಾಗೂ ಪ್ರಕಾಶ್ ಹುಂಕರಿ ಪಾಟೀಲ್ (24) ಹತ್ಯೆಯಾದವರು.
ಪ್ರಕರಣದ ವಿವರ: ನಿನ್ನೆ ರಾತ್ರಿ ಕೆಲ ಪಡ್ಡೆ ಹುಡುಗರು ಸುಳೇಭಾವಿ ಗ್ರಾಮದ ಲಕ್ಷ್ಮಿ ಗಲ್ಲಿಯ ಶಿವಾಜಿ ಪ್ರತಿಮೆಯ ಬಳಿ ನಿಂತು ಹರಟೆ ಹೊಡೆಯುತ್ತಿದ್ದರು. ಎಂಟೂವರೆ ಗಂಟೆ ಸುಮಾರಿಗೆ ಕೈಯಲ್ಲಿ ಮಾರಕಾಸ್ತ್ರಗಳು ಹಾಗೂ ಖಾರದ ಪುಡಿ ಹಿಡಿದುಕೊಂಡು ಬಂದ 10ಕ್ಕೂ ಅಧಿಕ ಯುವಕರ ಗ್ಯಾಂಗ್ ಅಲ್ಲೇ ನಿಂತಿದ್ದವರ ಮೇಲೆ ದಾಳಿ ಮಾಡಿದೆ.
ಯುವಕರ ಗ್ಯಾಂಗ್ ರೌದ್ರಾವತಾರ ಕಂಡ ಕೆಲ ಯುವಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ಇಬ್ಬರನ್ನ ಮಾತ್ರ ಎಲ್ಲಿಯೂ ಹೋಗದಂತೆ ತಡೆದಿದ್ದಾರೆ. ಏಕಾಏಕಿ ಲಾಂಗ್, ಮಚ್ಚುಗಳಿಂದ ಹಲ್ಲೆ ಮಾಡಲು ಆರಂಭಿಸಿದ್ದಾರೆ. ಈ ವೇಳೆ ಓರ್ವನನ್ನ ಶಿವಾಜಿ ವೃತ್ತದಲ್ಲೇ ಹತ್ಯೆ ಮಾಡಿದರೆ, ಇನ್ನೋರ್ವ ಅಲ್ಲಿಂದ ಎಸ್ಕೇಪ್ ಆಗಿ ಅಲ್ಲೇ ಇದ್ದ ಗಣಪತಿ ದೇವಸ್ಥಾನಕ್ಕೆ ಹೋಗಿ ಜೀವ ಉಳಿಸಿಕೊಳ್ಳಲು ಯತ್ನಿಸಿದ್ದಾನೆ. ಆದರೆ ಮೊದಲೇ ಪ್ಲ್ಯಾನ್ ಮಾಡಿಕೊಂಡ ಆರೋಪಿಗಳು ದೇವಸ್ಥಾನದ ಕಟ್ಟೆಯ ಮೇಲೆಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಾರೆ.
(ಓದಿ: ಅಜ್ಜಿಯನ್ನು ಕೊಂದು, ಗೋಡೆ ಕೊರೆದು ಶವ ಬಚ್ಚಿಟ್ಟ ತಾಯಿ ಮಗ: 5 ವರ್ಷದ ಬಳಿಕ ಪ್ರಕರಣ ಬೇಧಿಸಿದ ಬೆಂಗಳೂರು ಪೊಲೀಸ್ರು!)
ಗ್ರಾಮದಲ್ಲಿ ಬಿಗುವಿಣ ವಾತಾವರಣ, ಕಮಿಷನರ್ ಭೇಟಿ: ಘಟನೆಯನ್ನ ಕಂಡ ಲಕ್ಷ್ಮಿ ಗಲ್ಲಿ ಹಾಗೂ ಅಕ್ಕಪಕ್ಕದ ಗಲ್ಲಿಯ ಜನರು ಮಾರಿಹಾಳ ಪೊಲೀಸರಿಗೆ ಕೂಡಲೇ ಸುದ್ದಿ ಮುಟ್ಟಿಸಿದ್ದಾರೆ. ಪೊಲೀಸರು ಗ್ರಾಮಕ್ಕೆ ಬರುವ ಪೂರ್ವದಲ್ಲೇ ಘಟನೆ ನಡೆದ ಸುತ್ತಮುತ್ತಲಿನ ಮನೆಯವರು ಮನೆಗಳ ಬಾಗಿಲು ಹಾಕಿಕೊಂಡು ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ ಎನ್ನಲಾಗಿದೆ.