ಕರ್ನಾಟಕ

karnataka

ETV Bharat / state

ಬೇಕಾದ್ರೆ ಸುವರ್ಣಸೌಧಕ್ಕೆ ಕರೆದೊಯ್ಯಿರಿ, ನಮ್ಮಲ್ಲಿ ಕ್ವಾರಂಟೈನ್​ ಮಾಡಬೇಡಿ: ಸ್ಥಳೀಯರ ಆಕ್ರೋಶ

ಮಹಾರಾಷ್ಟ್ರದಿಂದ ಬಂದಿರುವ ವಲಸಿಗರನ್ನು ವಂಟಮೂರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಪರಿಣಾಮ ಇಲ್ಲಿ ಯಾರನ್ನೂ ಕ್ವಾರಂಟೈನ್ ಹಾಗೂ ಆರೋಗ್ಯ ತಪಾಸಣೆ ಮಾಡಬೇಡಿ. ಜಿಲ್ಲಾಸ್ಪತ್ರೆಗೆ‌ ಅಥವಾ ಸುವರ್ಣಸೌಧಕ್ಕೆ ಕರೆದೊಯ್ಯಿರಿ ಎಂದು ಮಾಳಮಾರುತಿ ಬಡಾವಣೆಯ ವಂಟಮೂರಿ ನಿವಾಸಿಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

Don't quarantine here: protest in belagavi
ಸುವರ್ಣಸೌಧ ಖಾಲಿಯಿದ್ರೂ ನಮ್ಮೇರಿಯಾದಲ್ಲೇಕೆ ಕ್ವಾರಂಟೈನ್ ಮಾಡ್ತಿದ್ದೀರಿ? ಜನರ ಆಕ್ರೋಶ

By

Published : May 23, 2020, 1:33 PM IST

ಬೆಳಗಾವಿ: ಖಾಲಿಯಿರುವ ಸುವರ್ಣ ಸೌಧದಲ್ಲಿ ಬೇಕಾದ್ರೆ ಕೊರೊನಾ ಶಂಕಿತರನ್ನು ಕ್ವಾರಂಟೈನ್ ಮಾಡಿ. ಅದನ್ನ ಬಿಟ್ಟು ನಮ್ಮೇರಿಯಾದಲ್ಲೇಕೆ ಕ್ವಾರಂಟೈನ್ ಮಾಡುತ್ತಿದ್ದೀರಿ ಎಂದು ಮಾಳಮಾರುತಿ ಬಡಾವಣೆಯ ವಂಟಮೂರಿ ನಿವಾಸಿಗಳು ಪ್ರತಿಭಟ‌‌ನೆ ನಡೆಸಿದರು.

ಪ್ರತಿಭಟ‌‌ನೆ

ಪ್ರತಿಭಟನೆ ನಡೆಸಿ, ನಮ್ಮ ಏರಿಯಾದಲ್ಲಿ ಯಾರೊಬ್ಬರನ್ನೂ ಕ್ವಾರಂಟೈನ್ ಮಾಡಬೇಡಿ ಎಂದು ಸ್ಥಳೀಯರು ಎಚ್ಚರಿಕೆ ನೀಡಿದರು. ಮಹಾರಾಷ್ಟ್ರದಿಂದ ಬಂದಿರುವ ವಲಸಿಗರನ್ನು ವಂಟಮೂರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ಮಾಡಲಾಗುತ್ತಿದೆ. ಯಾರಿಗಾದರೂ ಪಾಸಿಟಿವ್ ಬಂದ್ರೆ ವಂಟಮೂರಿ ಕಾಲನಿ ಸೀಲ್‌ ಡೌನ್ ಮಾಡಬೇಕಾಗುತ್ತದೆ. ಹೀಗಾಗಿ ಇಲ್ಲಿ ಯಾರನ್ನೂ ಕ್ವಾರಂಟೈನ್ ಹಾಗೂ ಆರೋಗ್ಯ ತಪಾಸಣೆ ಮಾಡಬೇಡಿ. ಜಿಲ್ಲಾಸ್ಪತ್ರೆಗೆ‌ ಕರೆದೊಯ್ಯಿರಿ ಅಥವಾ ಸುವರ್ಣ ಸೌಧಕ್ಕೆ ಕರೆದೊಯ್ಯಿರಿ. ಅದನ್ನು ಬಿಟ್ಟು ಯಾವುದೇ ಕಾರಣಕ್ಕೂ ಮಹಾರಾಷ್ಟ್ರದಿಂದ ಬಂದವರನ್ನು ಇಲ್ಲಿ ಕ್ವಾರಂಟೈನ್ ಮಾಡಬೇಡಿ ಎಂದು ಜಿಲ್ಲಾಡಳಿತ ವಿರುದ್ಧ ವಂಟಮೂರಿ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

ABOUT THE AUTHOR

...view details