ಕರ್ನಾಟಕ

karnataka

ETV Bharat / state

ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಸಿಎಂ ಪರಿಹಾರ ನಿಧಿಗೆ ದೇಣಿಗೆ - Milk Producers Cooperative Society

ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಸಿಎಂ ಪರಿಹಾರ ನಿಧಿಗೆ ರೂ.2,56,100 ದೇಣಿಗೆ ನೀಡಲಾಗಿದೆ.

Donations to CM Relief Fund from Milk Producers Cooperative Society
ಹಾಲು ಉತ್ಪಾದಕರ ಸಹಕಾರ ಸಂಘದಿಂದ ಸಿಎಂ ಪರಿಹಾರ ನಿಧಿಗೆ ದೇಣಿಗೆ

By

Published : Apr 28, 2020, 1:10 PM IST

ಬಳ್ಳಾರಿ: ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕಾಗಿ ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ ತಾಲೂಕಿನ ಒಟ್ಟು 50 ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಸಿಎಂ ಪರಿಹಾರ ನಿಧಿಗೆ 2,56,100 ರೂ. ದೇಣಿಗೆಯನ್ನು ನೀಡಲಾಗಿದೆ.

ಮೆಡಿಕಲ್ ಕಿಟ್‍ಗಳು, ಲ್ಯಾಬ್‍ಗೆ ಅಗತ್ಯ ಸಾಮಗ್ರಿಯುಳ್ಳ ಔಷಧೋಪಚಾರ ಹಾಗೂ ಸ್ಯಾನಿಟೈಸರ್ ಹಾಗೂ ಇತರೆ ಸಾಮಗ್ರಿಗಳನ್ನು ಪಡೆದುಕೊಳ್ಳಲು ಈ ದೇಣಿಗೆ ಹಣವನ್ನು ನೀಡಲಾಗಿದೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಆರ್ಥಿಕವಾಗಿ ನೆರವಾಗುವುದು ನಮ್ಮೆಲ್ಲರ ಕರ್ತವ್ಯ ಎಂದು ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಗಮದ ವ್ಯವಸ್ಥಾಪಕ ಜಿ. ನಾಗಮಣಿ ಅವರು ತಿಳಿಸಿದ್ದಾರೆ.

ABOUT THE AUTHOR

...view details