ಕರ್ನಾಟಕ

karnataka

ETV Bharat / state

ಮಾಲೀಕನ‌ ಅಗಲಿಕೆಯಿಂದ ದಿಕ್ಕು ತೋಚದಂತಾದ 'ಕಡ್ಡಿ'... ಅನ್ನ-ನೀರು ತ್ಯಜಿಸಿದ ಶ್ವಾನ! - ನಾಯಿ ಸುದ್ದಿ

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಅವರಾದಿ ಗ್ರಾಮದ ಶಂಕರಪ್ಪ ಮಡಿವಾಳ ಎಂಬವರು ಕಳೆದ ನಾಲ್ಕೈದು ದಿನಗಳ ಹಿಂದೆ ಹೃದಯಾಘಾತದಿಂದ ಸಾವನಪ್ಪಿದ್ದಾರೆ. ಇದರಿಂದ ಕಂಗಾಲಾಗಿರುವ ಸಾಕಿದ ಶ್ವಾನ 'ಕಡ್ಡಿ'ಯು ಯಜಮಾನನ ಅಗಲಿಕೆಯ ದುಃಖದಲ್ಲಿ ಅನ್ನ–ನೀರು ತ್ಯಜಿಸಿದೆ.

ಮಾಲೀಕನ‌ ಅಗಲಿಕೆಯಿಂದ ದುಃಖತಪ್ತವಾದ ಶ್ವಾನ
ಮಾಲೀಕನ‌ ಅಗಲಿಕೆಯಿಂದ ದುಃಖತಪ್ತವಾದ ಶ್ವಾನ

By

Published : Sep 13, 2020, 12:06 PM IST

ಚಿಕ್ಕೋಡಿ:ಮಾಲೀಕ ಸಾವನ್ನಪ್ಪಿದ್ದರಿಂದ ದಿಕ್ಕು ತೋಚದಂತಾದ ಸಾಕು ನಾಯಿ ಕಳೆದ ಮೂರ್ನಾಲ್ಕು ದಿನಗಳಿಂದ ಅನ್ನ-ನೀರು ಮುಟ್ಟದೆ ಶೋಕ ವ್ಯಕ್ತಪಡಿಸುತ್ತಿದೆ.

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಅವರಾದಿ ಗ್ರಾಮದ ಶಂಕರಪ್ಪ ಮಡಿವಾಳ ಎಂಬವರು ಕಳೆದ ನಾಲ್ಕೈದು ದಿನಗಳ ಹಿಂದೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಅವರು ಸಾಕಿದ ಶ್ವಾನ ಕಡ್ಡಿ ಯಜಮಾನನ ಅಗಲಿಕೆಯ ದುಃಖದಲ್ಲಿ ಅನ್ನ–ನೀರು ಬಿಟ್ಟಿದೆ.

ಮಾಲೀಕನ‌ ಅಗಲಿಕೆಯಿಂದ ದುಃಖತಪ್ತವಾದ ಶ್ವಾನ

ನಿಷ್ಟಾವಂತ ಪ್ರಾಣಿ ನಾಯಿ ಎಂಬ ಮಾತಿಗೆ ತಕ್ಕಂತೆ ಈ ಕಡ್ಡಿಯು ತನ್ನ ಮಾಲೀಕನ‌ ಅಗಲಿಕೆಯಿಂದ ಕಂಗಾಲಾಗಿದೆ. ನಿತ್ಯವೂ ತನ್ನ ಯಜಮಾನನ ಸಮಾಧಿ ಸ್ಥಳಕ್ಕೆ ಹೋಗಿ ಬರುತ್ತಿದೆ. ಮನೆಯಲ್ಲಿ ತನ್ನ ಯಜಮಾನ ಕುಳಿತುಕೊಳ್ಳುತ್ತಿದ್ದ ಸ್ಥಳ, ಮಲಗುತ್ತಿದ್ದ ಹಾಸಿಗೆ ಬಳಿ ಶ್ವಾನ ಕನವರಿಸುತ್ತಿರುವ ದೃಶ್ಯ ಮನಕಲಕುವಂತಿದೆ.

ಶಂಕರಪ್ಪ ಇದಕ್ಕೆ ಪ್ರೀತಿಯಿಂದ 'ಕಡ್ಡಿ' ಎಂದು ನಾಮಕರಣ ಮಾಡಿದ್ದರು. ತನ್ನ ಸ್ನೇಹಿತನಿಗಿಂತಲೂ ಹೆಚ್ಚಾಗಿ ನೋಡಿಕೊಳ್ಳುತ್ತಿದ್ದರಂತೆ. ಹೀಗಾಗಿ ಈ ಕಡ್ಡಿ ಮತ್ತು ಶಂಕರಪ್ಪ ನಡುವೆ ಬಾಂಧವ್ಯ ಬೆಳೆದಿತ್ತು. ಹೀಗಾಗಿ ಅವರು ಕಣ್ಮುಚ್ಚಿದ ಬಳಿಕ ಕಡ್ಡಿ ಏನನ್ನು ತಿನ್ನದೇ ಮೂಕವೇದನೆ ಅನುಭವಿಸುತ್ತಿದೆ ಎನ್ನುತ್ತಾರೆ ಸ್ಥಳೀಯರು.

ABOUT THE AUTHOR

...view details