ಕರ್ನಾಟಕ

karnataka

ETV Bharat / state

ಸಾಕಿ ಸಲುಹಿದ ಮನೆ ಒಡೆಯ ಇರದೆ ಅನ್ನ-ನೀರು ತ್ಯಜಿಸಿದ ನಾಯಿ-ಕೋತಿ ಮೂಕರೋಧನೆ - dog monkey groaned

ಒಡೆಯ ಈಗಲೋ ಆಗಲೋ ಬರ್ತಾನೆ ಅಂತಾ ಕಾದು ಕುಳಿತಿವೆ. ಆತ ಶಂಕ್ರಪ್ಪ ಓಡಾಡುತ್ತಿದ ಸ್ಥಳಗಳಲ್ಲಿ ಹುಡುಕಾಟ ನಡೆಸುತ್ತಿರುವ ಶ್ವಾನವ‌ನ್ನು ಬಾಗಲಕೋಟೆಯ ಮಹಾಲಿಂಗಪುರದಲ್ಲಿ ನೋಡಿದ ಗ್ರಾಮಸ್ಥರೋರ್ವರು ಆ ವಿಡಿಯೋ ಮಾಡಿದ್ದಾರೆ‌..

dog-and-monkey-leaves-food-after-their-owner-dies-in-heart-failure
ಮಾಲಿಕ ಮೃತಪಟ್ಟು 6ದಿನ ಕಳೆದರೂ ಅನ್ನ-ನೀರು ಮುಟ್ಟದೆ ನಾಯಿ-ಕೋತಿ ಮೂಕರೋಧನೆ

By

Published : Sep 14, 2020, 5:37 PM IST

ಬೆಳಗಾವಿ :ಮನೆ ಮಾಲೀಕ ಸಾವನ್ನಪ್ಪಿ 8 ದಿನವಾದ್ರೂ ಸಾಕಿದ ನಾಯಿ ಹಾಗೂ ಕೋತಿ ಊಟ, ತೊಟ್ಟು ನೀರು ಸೇವಿಸದೇ ಮೂಕರೋಧನೆ ಅನುಭವಿಸುತ್ತಿರುವ ಹೃದಯ ವಿದ್ರಾವಕ ಘಟನೆ ಇಲ್ಲಿನ ಮೂಡಲಗಿ ತಾಲೂಕಿನ ಅವರಾದಿ ಗ್ರಾಮದಲ್ಲಿ ಕಂಡು ಬಂದಿದೆ.

ಈ ಊರಿನ ಶಂಕರಪ್ಪ ಮಡಿವಾಳ ಎಂಬುವರು ಸೆ.6ರಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇವರು ಮೃತಪಟ್ಟು ಸುಮಾರು 8 ದಿನ ಕಳೆದ್ರೂ ನಾಯಿ ಮತ್ತು ಕೋತಿ ಅನ್ನ ಬಿಟ್ಟು ರೋಧಿಸುತ್ತಿವೆ.

ಸಾಕಿದ ಮಾಲೀಕನಿಲ್ಲದೇ ಅನಾಥ ಪ್ರಜ್ಞೆ.. ಆಹಾರ ಬಿಟ್ಟು ನಾಯಿ-ಕೋತಿ ಮೂಕರೋಧನೆ

ನಿತ್ಯ ಶಂಕರಪ್ಪ ನೀಡುತ್ತಿದ್ದ ರೊಟ್ಟಿ, ಹಣ್ಣುಗಳನ್ನು ತಿನ್ನುತ್ತಿದ್ದ ಕಡ್ಡಿ ಹೆಸರಿನ ಶ್ವಾನ ಹಾಗೂ ರಾಮು ಹೆಸರಿನ ಕೋತಿ ಇದೀಗ ಮಾಲೀಕನಿಲ್ಲದೆ ನೋವು ಅನುಭವಿಸ್ತಿವೆ. ಒಡೆಯ ಈಗಲೋ ಆಗಲೋ ಬರ್ತಾನೆ ಅಂತಾ ಕಾದು ಕುಳಿತಿವೆ. ಆತ ಶಂಕ್ರಪ್ಪ ಓಡಾಡುತ್ತಿದ ಸ್ಥಳಗಳಲ್ಲಿ ಹುಡುಕಾಟ ನಡೆಸುತ್ತಿರುವ ಶ್ವಾನವ‌ನ್ನು ಬಾಗಲಕೋಟೆಯ ಮಹಾಲಿಂಗಪುರದಲ್ಲಿ ನೋಡಿದ ಗ್ರಾಮಸ್ಥರೋರ್ವರು ಆ ವಿಡಿಯೋ ಮಾಡಿದ್ದಾರೆ‌. ಇತ್ತ ಮನೆಯಲ್ಲಿ ಇನ್ನೂಂದು ಶ್ವಾನ ಇದ್ದು ಅದು ಕೂಡ ಊಟ ಮಾಡುತ್ತಿಲ್ಲ. ಜತೆಗೆ ಕೋತಿಯೂ ಅನ್ನ ನೀರು ಬಿಟ್ಟು ಮಾಲೀಕನ ನೆನಪಿನಲ್ಲಿಯೇ ದಿನ ದೂಡುತ್ತಿದೆ.

ABOUT THE AUTHOR

...view details