ಬೆಳಗಾವಿ:ಕೊರೊನಾದಿಂದ ತಾಯಿ ಮೃತಪಟ್ಟ ನಾಲ್ಕೇ ದಿನಕ್ಕೆ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದ ಪುತ್ರನೂ ಮಹಾಮಾರಿಗೆ ಬಲಿಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ವೈದ್ಯರು ತಮ್ಮ ಜೀವ ಅಷ್ಟೇ ಅಲ್ಲ, ತಮ್ಮ ಕುಟುಂಬಸ್ಥರ ಬದುಕನ್ನೂ ಪಣಕ್ಕಿಟ್ಟು ಕೋವಿಡ್ ಸೋಂಕು ವಿರುದ್ಧ ವಾರಿಯರ್ಸ್ ಆಗಿ ಹೋರಾಡುತ್ತಿದ್ದಾರೆ. ಇಂಥ ಕೋವಿಡ್ ವಾರಿಯರ್ವೊಬ್ಬರ ಕರುಳು ಹಿಂಡುವ ದುರಂತ ಕಥೆ ಇದು. ಇಲ್ಲಿ ಮಹಾಮಾರಿ ಕೊರೊನಾಗೆ ಖಾಸಗಿ ಆಸ್ಪತ್ರೆ ವೈದ್ಯ ಹಾಗೂ ಆತನ ತಾಯಿ ಬಲಿಯಾಗಿದ್ದಾರೆ.
ಮೃತಪಟ್ಟ ವೈದ್ಯ ಮಹೇಶ್ ಪಾಟೀಲ್ ಬೆಳಗಾವಿಯ ವೈಭವ ನಗರ ನಿವಾಸಿ ಡಾ.ಮಹೇಶ್ ಪಾಟೀಲ್, ತಾಯಿ ಸುಮಿತ್ರಾ ಪಾಟೀಲ್ ಕೋವಿಡ್‌ಗೆ ಮೃತರಾದವರು. ಡಾ.ಮಹೇಶ್ ಪಾಟೀಲ್ ಒಂದೂವರೆ ವರ್ಷದ ಹೆಣ್ಣು ಮಗು, ಪತ್ನಿಯನ್ನು ಅಗಲಿದ್ದಾರೆ.
ಬೆಳಗಾವಿ ಚಿಲ್ಡ್ರನ್ಸ್ ಹಾಸ್ಪಿಟಲ್ ಪ್ರೈವೇಟ್ ಲಿಮಿಟೆಡ್ ಆಸ್ಪತ್ರೆಯಲ್ಲಿ ಡಾ.ಮಹೇಶ್ ಕೆಲಸ ಮಾಡುತ್ತಿದ್ದರು. ಪತ್ನಿ ಸುಮಿತ್ರಾ ಪಾಟೀಲ್ ಮತ್ತು ಮಗ ಮಹೇಶ್ ಮೃತಪಟ್ಟ ಸುದ್ದಿ ಕೇಳಿ ತಂದೆ ಕಲಗೌಡ ಪಾಟೀಲ್ ಕೂಡ ಅನಾರೋಗ್ಯದಿಂದ ಬಳಲುತ್ತಿದ್ದಾರೆ.
ಕೋವಿಡ್‌ನಿಂದ ಮೃತಪಟ್ಟ ತಾಯಿ ಸುಮಿತ್ರಾ ಪಾಟೀಲ್ ಕೋವಿಡ್ ಸೋಂಕಿತ ಮಗುವಿಗೆ ಚಿಕಿತ್ಸೆ ನೀಡಿದ್ದ ಡಾ.ಮಹೇಶ್ ಪಾಟೀಲ್‌ಗೆ ಕೊರೊನಾ ಸೋಂಕು ತಗುಲಿತ್ತು. ಬಳಿಕ ಅವರು ಹೋಮ್ ಐಸೋಲೇಷನ್‌ನಲ್ಲಿದ್ದರು. ಇದರಿಂದ ತಂದೆ, ತಾಯಿಗೂ ಕೋವಿಡ್ ತಗುಲಿದೆ. ಉಸಿರಾಟದ ತೊಂದರೆ ಕಾಣಿಸಿಕೊಂಡಾಗ ಡಾ.ಮಹೇಶ್ ಪಾಟೀಲ್ ಮೊದಲು ಆಸ್ಪತ್ರೆಗೆ ದಾಖಲಾಗಿದ್ದರು. ಮಗ ಆಸ್ಪತ್ರೆಗೆ ದಾಖಲಾದ ಎರಡೇ ದಿನಕ್ಕೆ ಮತ್ತೊಂದು ಆಸ್ಪತ್ರೆಗೆ ತಾಯಿ ಕೂಡ ದಾಖಲಾಗಿದ್ದು, ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದರು.
ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪುತ್ರನಿಗೆ ತಾಯಿ ಮೃತಪಟ್ಟಿರುವ ಸುದ್ದಿಯೂ ತಿಳಿದಿರಲಿಲ್ಲ. ತಾಯಿ ಸಾವನ್ನಪ್ಪಿದ ನಾಲ್ಕೇ ದಿನಕ್ಕೆ ಮಗ ಡಾ.ಮಹೇಶ್ ಪಾಟೀಲ್ (37) ಸಹ ಸಾವನ್ನಪ್ಪಿದ್ದಾರೆ. ಗಂಡನನ್ನು ಕಳೆದುಕೊಂಡ ಪತ್ನಿ ಕಣ್ಣೀರಿನಲ್ಲಿ ಕಾಲ ಕಳೆಯುತ್ತಿದ್ದು ಡಾ. ಮಹೇಶ್ ಕುಟುಂಬದಲ್ಲಿ ಈಗ ನೀರವ ಮೌನ ಆವರಿಸಿದೆ.
ವೈದ್ಯ ಮಹೇಶ್ ಪಾಟೀಲ್, ಪತ್ನಿ ಹಾಗು ಪುತ್ರ ಇದನ್ನೂಓದಿ:ಸಂಸದರ ನಿಧಿಯಡಿ ರಾಜ್ಯದ ಸಂಸದರು ಕೈಗೊಂಡ ಕ್ಷೇತ್ರಾಭಿವೃದ್ಧಿ ಕಾಮಗಾರಿಗಳ ಸ್ಥಿತಿಗತಿ ಹೇಗಿದೆ?