ಬೈಲಹೊಂಗಲ(ಬೆಳಗಾವಿ): ಮಹಾಮಾರಿ ಕೊರೊನಾ ಸೋಂಕು ದೇಶಕ್ಕೆ ಅಂಟಿಕೊಂಡಿದೆ. ಪ್ರತಿಯೊಬ್ಬರು ಎಚ್ಚರವಹಿಸುವುದರ ಜೊತೆಗೆ ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ನಯಾನಗರ ಸುಖದೇವಾನಂದ ಮಠದ ಪೀಠಾಧ್ಯಕ್ಷ ಶ್ರೀ ಅಭಿನವಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಕೊರೊನಾ ಸೋಂಕಿಗೆ ಭಯ ಪಡುವ ಬದಲು ಎಚ್ಚರವಹಿಸುವುದು ಅಗತ್ಯ. ಸರ್ಕಾರ ಘೋಷಿಸುವ ಲಾಕ್‌ಡೌನ್ ಆದೇಶಗಳನ್ನು ಪಾಲಿಸಬೇಕು ಎಂದು ಮಾಧ್ಯಮಗೋಷ್ಠಿಯಲ್ಲಿ ಮನವಿ ಮಾಡಿದರು. ಧರ್ಮ ಹಾಗೂ ಅವುಗಳ ಕುರಿತು ವಿಚಾರ ಮಾಡುವ, ಚರ್ಚಿಸುವ ಸಂದರ್ಭ ಇದಲ್ಲ. ಮುಖ್ಯವಾಗಿ ಕೊರೊನಾ ಹಿಮ್ಮೆಟ್ಟಿಸುವಲ್ಲಿ ಎಚ್ಚರವಹಿಸಬೇಕು. ಈನಿಟ್ಟಿನಲ್ಲಿ ನಯಾನಗರ ಗ್ರಾಮದ ಪ್ರತಿಯೊಬ್ಬರಿಗೂ ಮಠದಿಂದ ಮಾಸ್ಕ್ಗಳನ್ನು ವಿತರಿಸಲಾಗಿದೆ. ಧರಿಸಿಕೊಂಡೆ ಹೊರಗಡೆ ಬರಬೇಕು ಎಂದರು.