ಕರ್ನಾಟಕ

karnataka

ETV Bharat / state

ಸಾಲ ಮರುಪಾವತಿಗೆ ಒತ್ತಾಯಿಸಬೇಡಿ: ಬ್ಯಾಂಕ್​ಗಳಿಗೆ ಬೆಳಗಾವಿ ಡಿಸಿ ಖಡಕ್​ ಎಚ್ಚರಿಕೆ - ಸಾಲ ಮರುಪಾವತಿ

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಇಂದು ನಡೆದ ಬ್ಯಾಂಕ್​ ಹಾಗೂ ವಿಮಾ ಕಂಪನಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ವಿಮಾ ಪಾವತಿ ಅವಧಿಯನ್ನು ಆಗಸ್ಟ್ 20 ರವರೆಗೆ ವಿಸ್ತರಿಸುವುದಾಗಿ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಒಪ್ಪಿಕೊಂಡಿದ್ದಾರೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್​ ಅಂಗಡಿ ಹೇಳಿದರು. ಇದೇ ವೇಳೆ ಅನೇಕ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಸಾಲವನ್ನು ಮರುಪಾವತಿಸುವಂತೆ ಯಾವುದೇ ಕಾರಣಕ್ಕೂ ಒತ್ತಾಯಿಸಬಾರದು ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಎಚ್ಚರಿಕೆ ನೀಡಿದರು.

ಬೆಳಗಾವಿ ಡಿಸಿ ಎಚ್ಚರಿಕೆ

By

Published : Aug 14, 2019, 3:23 PM IST

ಬೆಳಗಾವಿ: ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಅವಧಿಯನ್ನು ವಿಸ್ತರಿಸಲು ಕೇಂದ್ರ ಹಣಕಾಸು ಸಚಿವರು ಒಪ್ಪಿಗೆ ನೀಡಿದ್ದು, ಆ ಪ್ರಕಾರ ಬ್ಯಾಂಕುಗಳು ರೈತರಿಂದ ಕಂತು ಭರಿಸಿಕೊಳ್ಳಬೇಕು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ಬ್ಯಾಂಕ್​ ಹಾಗೂ ವಿಮಾ ಕಂಪನಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ವಿಮಾ ಪಾವತಿ ಅವಧಿಯನ್ನು ಆಗಸ್ಟ್ 20 ರವರೆಗೆ ವಿಸ್ತರಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಒಪ್ಪಿಕೊಂಡಿದ್ದಾರೆ. ಆ ಪ್ರಕಾರ ಬ್ಯಾಂಕುಗಳು ಹಾಗೂ ಬೆಳೆ ವಿಮಾ ಕಂಪನಿಗಳು ರೈತರಿಂದ ಕಂತುಗಳನ್ನು ಭರಿಸಿಕೊಳ್ಳಬೇಕು. ಈ ಬಗ್ಗೆ ಜಿಲ್ಲಾ ಲೀಡ್ ಬ್ಯಾಂಕಿನ ವ್ಯವಸ್ಥಾಪಕರಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದರು.

ಮರುಪಾವತಿಗೆ ಒತ್ತಾಯಿಸದಂತೆ ಡಿಸಿ ಎಚ್ಚರಿಕೆ:ರೈತರು ಈಗಾಗಲೇ ಅನೇಕ ಬ್ಯಾಂಕುಗಳಲ್ಲಿ ಮಾಡಿರುವ ಸಾಲವನ್ನು ಮರುಪಾವತಿಸುವಂತೆ ಯಾವುದೇ ಕಾರಣಕ್ಕೂ ಒತ್ತಾಯಿಸಬಾರದು ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಬ್ಯಾಂಕ್​ಗಳಿಗೆ ಎಚ್ಚರಿಕೆ ನೀಡಿದರು. ರೈತರು ಸೇರಿದಂತೆ ಇತರೆ ಸಾಲಗಾರರಿಂದ ಸ್ವಾಧೀನಪಡಿಸಿಕೊಂಡಿರುವ ಆಸ್ತಿಪಾಸ್ತಿಗಳನ್ನು ಹರಾಜು ಮಾಡುವುದಾಗಲಿ ಅಥವಾ ಹೊಸದಾಗಿ ಸ್ವಾಧೀನಪಡಿಸಿಕೊಳ್ಳುವುದನ್ನು ಸದ್ಯಕ್ಕೆ ತಡೆ ಹಿಡಿಯುವಂತೆ ತಿಳಿಸಿದರು.

ಪರಿಹಾರ ಚೆಕ್​ಗಳನ್ನು ಅಕೌಂಟ್ ಪೇಯಿ ಚೆಕ್ ನೀಡಲಾಗಿದ್ದು, ಅಂತಹ ಚೆಕ್​ಗಳನ್ನು ತಕ್ಷಣ ನಗದೀಕರಿಸುವಂತೆ ಬ್ಯಾಂಕುಗಳಿಗೆ ಸೂಚನೆ ನೀಡಿದರು. ಒಂದು ವೇಳೆ ಯಾವುದೇ ರೀತಿಯ ವಿಮೆ ಅಥವಾ ಪರಿಹಾರ ಹಣವನ್ನು ಸಾಲ ಪಾವತಿಗೆ ತೆಗೆದುಕೊಂಡರೆ ಅಂತಹ‌ ಬ್ಯಾಂಕುಗಳ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಖಡಕ್​ ಎಚ್ಚರಿಕೆ ನೀಡಿದ್ರು.

ABOUT THE AUTHOR

...view details