ಕರ್ನಾಟಕ

karnataka

ETV Bharat / state

ಕಾಂಗ್ರೆಸ್​​ಗೆ ಮತ ಹಾಕಿದ್ರೆ ಬೆಳಗಾವಿ ಜನರಿಗೆ ಶೇ. 50ರಷ್ಟು ತೆರಿಗೆ ವಿನಾಯಿತಿ: ಡಿ.ಕೆ.ಶಿವಕುಮಾರ್ - dks pressmeet in belgavi

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ತೆರಿಗೆ ಹಣದಲ್ಲಿ ಬೆಳಗಾವಿ ಜನರಿಗೆ ಶೇ. 50ರಷ್ಟು ತೆರಿಗೆ ವಿನಾಯಿತಿ ನೀಡುವುದಾಗಿ ಡಿ.ಕೆ.ಶಿವಕುಮಾರ್​ ಘೋಷಿಸಿದ್ದಾರೆ.

dksh announces 50 percent tax deduction for belagavi people
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸುದ್ದಿಗೋಷ್ಟಿ

By

Published : Aug 29, 2021, 6:54 PM IST

ಬೆಳಗಾವಿ:ಪಾಲಿಕೆಯಲ್ಲಿ ಕಾಂಗ್ರೆಸ್​​ಗೆ ಮತ ಹಾಕಿ ಬೆಳಗಾವಿ ನಗರದ ಜನರಿಗಾಗಿ 50 ಪ್ರತಿಶತ ತೆರಿಗೆ ವಿನಾಯಿತಿ ನೀಡಲಾಗುವುದು ಎಂದು‌ ಭರವಸೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸುದ್ದಿಗೋಷ್ಟಿ

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೊನಾ ಸಂಕಷ್ಟ ಹಿನ್ನೆಲೆಯಲ್ಲಿ ಸವಿತಾ ಸಮಾಜ, ಡ್ರೈವರ್, ಬೀದಿ ಬದಿ ವ್ಯಾಪಾರಸ್ಥರು, ಅಸಂಘಟಿತ ಕಾರ್ಮಿಕರಿಗೆ ಹತ್ತು ಸಾವಿರ ಕೊಡಿ ಎಂದು ಹೇಳಿದ್ವಿ, 28 ಸಾವಿರ ಕೋಟಿ ರೂ ಕೊಟ್ಟಿದ್ದಾರೆ. ಅದರಲ್ಲಿ ಬೆಳಗಾವಿಯಲ್ಲಿ ಯಾರಿಗೆ ಕೊಟ್ಟಿದ್ದೀರಾ ಎಂದು ಪ್ರಶ್ನಿಸಿದರು.

ಶೇಕಡಾ 50ರಷ್ಟು ತೆರಿಗೆ ಮನ್ನಾ:

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ತೆರಿಗೆ ಹಣದಲ್ಲಿ ಎಲ್ಲ ವರ್ಗದವರಿಗೆ ಐದೈದು ಸಾವಿರ ರೂ. ಸಹಾಯ ಮಾಡುವ ಕಾರ್ಯಕ್ರಮ ರೂಪಿಸುತ್ತೇವೆ. ಕಾರ್ಪೊರೇಷನ್‌ನಲ್ಲಿ ಕಾಂಗ್ರೆಸ್‌ಗೆ ಮತ ಹಾಕಿದ್ರೆ ಶೇಕಡಾ 50ರಷ್ಟು ತೆರಿಗೆ ಮನ್ನಾ ಮಾಡ್ತೀವಿ.

ಯಾರಿಗೆ ರೈಲು ಬಿಟ್ರು ಎಂದು ವ್ಯಂಗ್ಯ:

ಲೋಕಸಭೆ ಉಪಚುನಾವಣೆಯಲ್ಲಿ ಬೆಳಗಾವಿ ಮಹಾಜನತೆ ನಮಗೆ ಚುನಾವಣೆಯಲ್ಲಿ ಸೋತರೂ ನಮ್ಮ ಪಕ್ಷದ ಅಭ್ಯರ್ಥಿಗೆ ಹೆಚ್ಚಿನ ಬಲ ಕೊಟ್ಟಿದ್ದಾರೆ. ಬಿಜೆಪಿ ತನ್ನ ಪ್ರಣಾಳಿಕೆ ಮಾಡಿದ್ದಾರೆ ಅಂತಾ ಹೇಳಿ ಸುದ್ದಿಗೋಷ್ಠಿ ಮಾಡ್ತಿಲ್ಲ. ಮೊದಲ ಬಾರಿ ಬಿಜೆಪಿಯವರು ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಹುಬ್ಬಳ್ಳಿ ಧಾರವಾಡದಲ್ಲಿ 15 ವರ್ಷದಿಂದ ಆಡಳಿತದಲ್ಲಿದ್ದು ಎರಡು ಪ್ರಣಾಳಿಕೆ ಬಿಡುಗಡೆ ಮಾಡಿದ್ರು. ಬಿಜೆಪಿ ಪ್ರಣಾಳಿಕೆಯಲ್ಲಿ ಬೆಳಗಾವಿ ಸೇರಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಬೆಂಗಳೂರು ಹುಬ್ಬಳ್ಳಿ ಬೆಳಗಾವಿ ಹೈಸ್ಪೀಡ್ ರೈಲು ಮಾಡ್ತೀವಿ ಅಂದಿದ್ದಾರೆ. ಎಲ್ಲಿ ಯಾರಿಗೆ ರೈಲು ಬಿಟ್ರು ಅಂತಾ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು.

ಬೆಳಗಾವಿ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ:

ರಾಜ್ಯ, ಕೇಂದ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ, ಬೆಳಗಾವಿ ನಗರದ ಇಬ್ಬರು ಶಾಸಕರು ಬಿಜೆಪಿಯವರು, ಸಂಸದರು ಬಿಜೆಪಿಯವರು. ಡಬಲ್ ಇಂಜಿನ್ ಸರ್ಕಾರ ಈಗ ತ್ರಿಬಲ್ ಇಂಜಿನ್ ಸರ್ಕಾರ ಅಂತಾ ಹೇಳ್ತಾರೆ. ಸುವರ್ಣಸೌಧ ನಿರ್ಮಿಸಿ ಬೆಳಗಾವಿ ಎರಡನೇ ರಾಜಧಾನಿ ಅಂತಾ ಘೋಷಿಸಿ ಉದಾಸೀನತೆ ತೋರುತ್ತಿದ್ದಾರೆ. ಬೆಳಗಾವಿಯಲ್ಲಿ ಒಂದು ವಾರ ಸೆಷನ್ ನಡೆಸಿದ್ರೆ ಬೆಳಗಾವಿಗೆ ಆರ್ಥಿಕ ಬಲ ಬರುತ್ತೆ. ಆದ್ರೆ, ಬೆಳಗಾವಿ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ. 20 ವರ್ಷದಿಂದ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಸಿಡಿಪಿ ಇರಲಿಲ್ಲ. ಸತೀಶ್ ಜಾರಕಿಹೊಳಿ‌ ಸಚಿವರಾಗಿದ್ದಾಗ ಸಿಡಿಪಿ ಬಂದಿದೆ.ಮತ್ತೊಂದು ಸಿಡಿಪಿ ಕೊಡ್ತೀವೆ, ಅಭಿವೃದ್ಧಿ ಜೊತೆ ಉದ್ಯೋಗ ಸೃಷ್ಟಿ ಮಾಡುತ್ತೇವೆ.ಜನರು ಉದ್ಯೋಗಕ್ಕೆ ಬೆಂಗಳೂರಿಗೆ ಹೋಗೋದು ತಪ್ಪಬೇಕು. ಕೇವಲ ಬೆಂಗಳೂರಿಗೆ ಬಿಲ್ಡಿಂಗ್‌ಗಳು ಸೀಮಿತ ಆಗಬಾರದು ಇಲ್ಲಿಗೂ ಬೇಕು. ಐಟಿ ಪಾರ್ಕ್, ಕಚೇರಿ, ಹೋಟೆಲ್ ಸೇರಿ ಕಮರ್ಷಿಯಲ್ ಎಸ್ಟಾಬ್ಲಿಷ್‌ಮೆಂಟ್ ಮಾಡಬೇಕಾಗುತ್ತದೆ.‌ ಕಾಂಗ್ರೆಸ್​ಗೆ ಅಧಿಕಾರ ಕೊಟ್ರೆ ಹೊಸ ಸಿಡಿಪಿ ರಚಿಸಿ ಸರ್ಕಾರಕ್ಕೆ ಶಿಫಾರಸು ಮಾಡಲಾಗುತ್ತದೆ‌ ಎಂದರು.

ಅಮಾನವೀಯವಾಗಿ ಸುರೇಶ್ ಅಂಗಡಿ ಅಂತ್ಯಸಂಸ್ಕಾರ:

ಕೇಂದ್ರ ಸಚಿವ ಸುರೇಶ್ ಅಂಗಡಿ ಅಂತ್ಯಸಂಸ್ಕಾರ ಬಗ್ಗೆ ಪ್ರಸ್ತಾಪಿಸಿದ ಡಿಕೆಶಿ, ಕೇಂದ್ರ ಸರ್ಕಾರ ಅಮಾನವೀಯವಾಗಿ ಸುರೇಶ್ ಅಂಗಡಿ ಅಂತ್ಯಸಂಸ್ಕಾರ ಮಾಡಿತು.ಓರ್ವ ಕೇಂದ್ರ ಸಚಿವ ಮೃತದೇಹ ತಂದು ಕೊಡಲು ಇವರ ಕೈಯಲ್ಲಿ ಆಗಲಿಲ್ಲ. ಕ್ಷೇತ್ರದ ಜನರಿಗೆ ಸುರೇಶ್ ಅಂಗಡಿ ದರ್ಶನ ಕೊಡಿಸಲು ಆಗಲಿಲ್ಲ.ಇಂಡಿಯನ್ ಏರ್‌ಫೋರ್ಸ್ ಫ್ಲೈಟ್‌ನಲ್ಲಿ ಅವರ ಕುಟುಂಬಕ್ಕೆ ಮೃತದೇಹ ತಂದುಕೊಡಕ್ಕಾಗಲಿಲ್ಲ. ಇದಕ್ಕೆ ವೋಟ್ ಹಾಕಬೇಕಾ ಬೆಳಗಾವಿ ಜನ? ಎಂದು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.

ಸಿ‌.ಟಿ.ರವಿ ಹೇಳಿಕೆಗೆ ಪ್ರತಿಕ್ರಿಯೆ:

ಕಾಂಗ್ರೆಸ್‌ನಲ್ಲಿ ಪ್ರಮೋಷನ್ ಸಿಗಬೇಕಂದ್ರೆ ಜೈಲಿಗೆ ಹೋಗಬೇಕು ಎಂಬ ಸಿ‌.ಟಿ.ರವಿ ಹೇಳಿಕೆ ವಿಚಾರಕ್ಕೆ,ಬಹಳ ಸಂತೋಷ. ಅವರ ಸರ್ಟಿಫಿಕೇಟ್ ಅವಶ್ಯಕತೆ ಇದೆ. ಪಾಪ ನಮ್ಮ ಯಡಿಯೂರಪ್ಪರವರಿಗೂ ಒಂದು ಸರ್ಟಿಫಿಕೇಟ್ ಇತ್ತು.ಅಮಿತ್ ಶಾ ಸರ್‌ಗೂ ಒಂದು ಸರ್ಟಿಫಿಕೇಟ್ ಇತ್ತು. ಉಮಾಭಾರತಿಯವರಿಗೂ ಒಂದು ಸರ್ಟಿಫಿಕೇಟ್ ಇತ್ತು. ಬೇಕಾದಷ್ಟು ಹೆಸರುಗಳಿವೆ ಪಟ್ಟಿ ಬೇಕಾ, ಇನ್ನೆಷ್ಟು ಹೆಸರು ಬೇಕು? ಎಂದು‌ ಖಾರವಾಗಿ ಪ್ರತಿಕ್ರಿಯೆ ನೀಡಿದರು. ಡಿಕೆಶಿ ಕೋತ್ವಾಲ್ ರಾಮಚಂದ್ರ ಶಿಷ್ಯ ಎಂಬ ಸಿ.ಟಿ.ರವಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು,ಸಿ.ಟಿ.ರವಿ ಅವರೇ ಶಿಷ್ಯ ಇರಬೇಕು ಎಂದರು.

ABOUT THE AUTHOR

...view details