ಕರ್ನಾಟಕ

karnataka

ETV Bharat / state

ಮಾಜಿ ಕೇಂದ್ರ ಸಚಿವ ಬಾಬಾಗೌಡರನ್ನು ದಿಢೀರ್ ಭೇಟಿಯಾದ ಡಿಕೆಶಿ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಇಂದು ಕೇಂದ್ರ ಮಾಜಿ ಸಚಿವ ‌ಬಾಬಾಗೌಡ ಪಾಟೀಲ ಅವರನ್ನು ಭೇಟಿ ಮಾಡಿ ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.

ಕೇಂದ್ರ ಮಾಜಿ ಸಚಿವ ಬಾಬಾಗೌಡರನ್ನು ದಿಢೀರ್ ಭೇಟಿಯಾದ ಡಿಕೆಶಿ
DK Shivakumar met Former Central Minister Babagouda Patil at Belgaum

By

Published : Apr 8, 2021, 12:58 PM IST

Updated : Apr 8, 2021, 2:25 PM IST

ಬೆಳಗಾವಿ:ಕೇಂದ್ರ ಮಾಜಿ ಸಚಿವ ‌ಬಾಬಾಗೌಡ ಪಾಟೀಲ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದಿಢೀರ್ ಭೇಟಿಯಾಗಿ ಅಚ್ಚರಿ ಮೂಡಿಸಿದರು.

ಮಾಜಿ ಕೇಂದ್ರ ಸಚಿವ ಬಾಬಾಗೌಡರನ್ನು ದಿಢೀರ್ ಭೇಟಿಯಾದ ಡಿಕೆಶಿ

ಬೆಳಗಾವಿ ‌ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದ ಬಾಬಾಗೌಡ ಪಾಟೀಲ ನಿವಾಸಕ್ಕೆ ಆಗಮಿಸಿದ ಡಿ.ಕೆ.ಶಿ ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸುವಂತೆ ಮನವಿ ಮಾಡಿದರು. ಈ ವೇಳೆ ಪಾಟೀಲರು ಕೂಡ ಸಕಾರಾತ್ಮಕವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿರುವ ಬಾಬಾಗೌಡ ಈ ಭಾಗದ ರೈತ ಸಮುದಾಯದ ಮಹಾನ್​ ನಾಯಕ. ಕೇಂದ್ರ ಸರ್ಕಾರದ ಕೃಷಿ ವಿರೋಧಿ, ಕಾರ್ಮಿಕ ವಿರೋಧಿ ನೀತಿಗೆ ಜನರು ಬೇಸತ್ತಿದ್ದಾರೆ. ಕೇಂದ್ರದ ಜನ ವಿರೋಧಿ ನೀತಿ ವಿರುದ್ಧ ಪಾಟೀಲರು ಕೂಡ ಹೋರಾಡುತ್ತಿದ್ದಾರೆ. ಅವರ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲವೂ ಇರಲಿದೆ ಎಂದರು.

ಇದನ್ನೂ ಓದಿ: ಸರ್ಕಾರ ನಡೆಸುವುದು ನಮಗೆ ಗೊತ್ತಿದೆ: ಗರಂ ಆದ ಸಿಎಂ

ಪಾಟೀಲರನ್ನು ಭೇಟಿಯಾಗಿ ಬೆಂಬಲ ಪಡೆಯುವಂತೆ ನಮ್ಮ ನಾಯಕರಾದ ರಾಹುಲ್ ಗಾಂಧಿ ಸೂಚನೆ ನೀಡಿದ್ದರು. ದೆಹಲಿ ಪ್ರತಿನಿಧಿಯಾಗಿ ಕೆ.ಎಚ್. ಮುನಿಯಪ್ಪ ಕೂಡ ಪಾಟೀಲರ ಬೆಂಬಲ ಕೋರಲು ನಮ್ಮ ಜೊತೆಗೆ ಬಂದಿದ್ದಾರೆ. ಅವರ ಬೆಂಬಲ ಈ ಚುನಾವಣೆಯಲ್ಲಿ ನಮಗೆ ಸಿಗಲಿದೆ ಎಂದರು.

ಈ ವೇಳೆ, ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ಕಾಂಗ್ರೆಸ್ ಕಿಸಾನ್ ಘಟಕದ ರಾಜ್ಯಾಧ್ಯಕ್ಷ ಸಚಿನ್ ಮೀಗಾ ಇದ್ದರು.

Last Updated : Apr 8, 2021, 2:25 PM IST

ABOUT THE AUTHOR

...view details