ಕರ್ನಾಟಕ

karnataka

ETV Bharat / state

ಆರೋಗ್ಯ ಸಚಿವರೇ ಮಾಸ್ಕ್‌ ಧರಿಸುತ್ತಿಲ್ಲ, ಬೇರೆಯವರಿಗೆ ಯಾಕೆ ಹೇಳುತ್ತೀರಿ?: ಡಿ.ಕೆ.ಶಿವಕುಮಾರ್ - ಮಾಸ್ಕ್

ರೂಲ್ಸ್​ ಮಾಡಿರುವವರೇ ಮಾಸ್ಕ್​ ಧರಿಸುತ್ತಿಲ್ಲ. ಸಚಿವ ಅಶೋಕ್​ ಅವರು ಬಾರುಗಳಲ್ಲಿ​ ಹೊಸ ಮಾಸ್ಕ್ ಬಂದಿವೆ. ಅವುಗಳನ್ನು ಧರಿಸಿ ಮದ್ಯ ಸೇವನೆ ಮಾಡಬಹುದು ಎಂದು ಹೇಳಿದ್ದಾರೆ. ಇದರ ಬದಲಿಗೆ ಅವರೇ ತಮ್ಮ ಬಾಯಿಯೊಳಗೆ ಪೈಪ್​ ಹಾಕಿಕೊಳ್ಳಲಿ ಎಂದು ಡಿ.ಕೆ.ಶಿವಕುಮಾರ್​ ವ್ಯಂಗ್ಯವಾಡಿದರು.

ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್

By

Published : Dec 28, 2022, 4:32 PM IST

ಸರ್ಕಾರದ ಕೊರೊನಾ ನಿಯಮಗಳನ್ನು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಟೀಕಿಸಿದರು.

ಬೆಳಗಾವಿ: ಸರ್ಕಾರ ಕೊರೊನಾ ನಿಯಮಗಳನ್ನು ಜಾರಿಗೆ ತಂದಿದೆ. ಆದರೆ ಮುಖ್ಯಮಂತ್ರಿ, ಆರೋಗ್ಯ ಸಚಿವರು ಯಾರೂ ಮಾಸ್ಕ್ ಧರಿಸುತ್ತಿಲ್ಲ. ಎಸಿ ರೂಮಿನಲ್ಲಿ ಕುಳಿತುಕೊಂಡು ಸಭೆ, ಸಮಾರಂಭ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹರಿಹಾಯ್ದರು.

ಬೆಳಗಾವಿಯಲ್ಲಿ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ನಡೆಯಿತು. ನಂತರ ಮಾಧ್ಯಮಗಳ ಜೊತೆ ಡಿಕೆಶಿ ಮಾತನಾಡಿದರು. ಆಡಳಿತಾರೂಢ ಸರ್ಕಾರ ಮಾಸ್ಕ್​​ ಧರಿಸುತ್ತಿಲ್ಲ. ಬೇರೆಯವರಿಗೆ ಧರಿಸುವಂತೆ ಹೇಳುತ್ತಿದ್ದಾರೆ. ವಿಧಾನಸೌಧದಲ್ಲಿ ಆರೋಗ್ಯ ಸಚಿವರೂ ಮಾಸ್ಕ್ ಧರಿಸುತ್ತಿಲ್ಲ, ಅಂಥದ್ರಲ್ಲಿ ಬೇರೆಯವರಿಗೆ ಯಾಕೆ ನೀವು ಹೇಳುತ್ತಿದ್ದೀರಿ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವ ಅಶೋಕ್ ಹೊಸ ಮಾಸ್ಕ್​​ ವಿಚಾರ:ಮಂಗಳವಾರವಷ್ಟೇ ಕಂದಾಯ ಸಚಿವ ಅಶೋಕ್ ಬಾರ್​ನಲ್ಲಿ ಹೊಸ ಮಾಸ್ಕ್ ಬಂದಿವೆ. ಅವುಗಳನ್ನು ಧರಿಸಿ ಮದ್ಯ ಸೇವನೆ ಮಾಡಬಹುದು ಎಂದು ಹೇಳಿಕೆ ನೀಡಿದ್ದರು. ಈ ವಿಚಾರಕ್ಕೆ ಡಿಕೆಶಿ ಪ್ರತಿಕ್ರಿಯಿಸಿ, ಆರ್.ಅಶೋಕ್ ಹಾಗೂ ಅವರ ಸ್ನೇಹಿತರು ಬಾಯಿಯೊಳಗೆ ಪೈಪ್​ ಹಾಕಿಕೊಳ್ಳಲಿ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ:ಮಾಸ್ಕ್ ಹಾಕಿಕೊಂಡು ಡ್ರಿಂಕ್ ಮಾಡಬಹುದು, ಪಬ್​ ಬಾರ್​ಗಳಲ್ಲಿ ಅದನ್ನು ಬಳಸಲಿ: ಆರ್ ಅಶೋಕ್ ಅಚ್ಚರಿ ಹೇಳಿಕೆ

ದಿವಂಗತ ಸುರೇಶ್ ಅಂಗಡಿ ಅವರ ಶವ ಸಂಸ್ಕಾರ ವಿಚಾರದಲ್ಲಿ ಬಿಜೆಪಿ ಸರ್ಕಾರ ಹೇಗೆ ನಡೆದುಕೊಂಡಿದೆ ಎನ್ನುವುದನ್ನು ಜನರು ನೋಡಿದ್ದಾರೆ. ಪಾಪ ಅವರ ಶವವನ್ನು ತರುವುದಕ್ಕೆ ಆಗದಷ್ಟು ಸರ್ಕಾರ ವಿಫಲವಾಯಿತು. ಒಂದು ಸೇನೆಯ ವಾಹನದಲ್ಲಿ ಅವರ ಶವವನ್ನು ತರಬಹುದಿತ್ತು. ಆದರೆ ಶವ ಸಂಸ್ಕಾರ ಮಾಡುವುದಕ್ಕೆ ಆಗಲಿಲ್ಲ. ಇದು ನಾಚಿಕೆಗೇಡಿನ ವಿಷಯ. ಇವರು ಸಂಸ್ಕೃತಿ, ಧರ್ಮದ ವಿಚಾರದ ಬಗ್ಗೆ ಮಾತನಾಡುತ್ತಾರೆ. ಬಿಜೆಪಿ ನಾಯಕರು ಮಾತನಾಡದಷ್ಟೂ ಶಕ್ತಿ ಕಳೆದುಕೊಂಡಿದ್ದಾರೆ ಎಂದು ಟೀಕಿಸಿದರು.

ಗಡಿ ವಿಚಾರದಲ್ಲಿ ಬಿಜೆಪಿಯಿಂದ ರಾಜಕೀಯ: ಗಡಿ ವಿಚಾರವನ್ನು ಬಿಜೆಪಿ ಬೇಕಂತಲೇ ಚರ್ಚೆಗೆ ತರುತ್ತಿದೆ. ಮಹಾರಾಷ್ಟ್ರ, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದೆ. ಮತ್ತೆ ಯಾಕೆ ಈ ಗೊಂದಲಗಳು.? ನಮ್ಮ ಯಾವ ಸ್ಥಳಗಳನ್ನೂ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಆ ಕಡೆಯಿಂದ ಯಾವ ಗ್ರಾಮಗಳೂ ಬರುವುದಿಲ್ಲ. ಆದರೆ ಬಿಜೆಪಿ ಇದರಲ್ಲಿ ರಾಜಕೀಯ ಮಾಡುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ:ಡಿ ಕೆ ಶಿವಕುಮಾರ್‌ಗೆ ನೊಬೆಲ್ ಪ್ರಶಸ್ತಿ ಕೊಡ್ಬೇಕು: ಸಚಿವ ಆರ್ ಅಶೋಕ್ ವ್ಯಂಗ್ಯ

ಮಂಗಳವಾರ ಬೆಳಗಾವಿಯಲ್ಲಿ ಸಚಿವ ಅಶೋಕ್​ ಮಾತನಾಡಿ, ನಿಮಗ್ಯಾರಿಗೋ ಬಾರ್ ವ್ಯಾಪಾರ ಆಗಬೇಕೆಂದು ಜನರ ಪ್ರಾಣ ತೆಗೆಯೋದು ಒಳ್ಳೆಯದಲ್ಲ. ಬಾರ್, ಪಬ್‌ಗಳಲ್ಲಿ ಕುಳಿತು ಡ್ರಿಂಕ್ಸ್ ಮಾಡಲು ಸ್ಪೆಷಲ್ ಮಾಸ್ಕ್ ರಿಲೀಸ್ ಮಾಡಿದ್ದಾರೆ. ಆ ಮಾಸ್ಕ್‌ಗಳನ್ನು ಪಡೆದು ಪಬ್, ಬಾರ್‌ನವರು ಗ್ರಾಹಕರಿಗೆ ನೀಡಲಿ. ಮಾಸ್ಕ್ ಹಾಕಿಕೊಂಡೇ ಡ್ರಿಂಕ್ಸ್ ಮಾಡಬಹುದು ಎಂದು ಹೇಳಿದ್ದರು. ಇದನ್ನು ಟೀಕಿಸಿರುವ ಡಿಕೆಶಿ, ಸಚಿವ ಅಶೋಕ್ ಪೈಪ್​ ಹಾಕಿಕೊಂಡು ಕುಡಿಯಲಿ ಎಂದು ಹೇಳಿದ್ದಾರೆ.

ABOUT THE AUTHOR

...view details