ಕರ್ನಾಟಕ

karnataka

ETV Bharat / state

ರಾಜು ಕಾಗೆ ಕಾಂಗ್ರೆಸ್​ ಸೇರ್ಪಡೆ ವದಂತಿಯಿಂದ ಸಿಡಿದೆದ್ರಾ ಹುಕ್ಕೇರಿ?... ಪ್ರತಿಭಟನೆಗೆ ಗೈರಾಗಿದ್ದೇಕೆ? - Dissatisfaction in Chikkodi Congress

ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಕಾಗವಾಡ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು, ಆದರೆ ರಾಜು ಕಾಗೆ ಕಾಂಗ್ರೆಸ್ ಸೇರ್ಪಡೆಯಾದರೆ ಪ್ರಕಾಶ ಹುಕ್ಕೇರಿಗೆ ಅವಕಾಶ ಕೈ ತಪ್ಪಬಹುದು ಈ ಕಾರಣದಿಂದ ಸಿಟ್ಟಾಗಿರುವ ಪ್ರಕಾಶ ಹುಕ್ಕೇರಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿಲ್ಲ ಎನ್ನಲಾಗುತ್ತಿದೆ.

ಚಿಕ್ಕೋಡಿ ಕೈ ಪಾಳಯದಲ್ಲಿ ಅಸಮಧಾನ ಸ್ಪೋಟ

By

Published : Nov 11, 2019, 4:59 PM IST

ಚಿಕ್ಕೋಡಿ: ರಾಜು ಕಾಗೆ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಅಸಮಧಾನ ಸ್ಪೋಟಗೊಂಡಿದ್ದು, ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಶಾಸಕ ಗಣೇಶ ಹುಕ್ಕೇರಿ ಹಾಗೂ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಗೈರಾಗಿದ್ದಾರೆ.

ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಕಾಗವಾಡ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು, ಆದರೆ ರಾಜು ಕಾಗೆ ಕಾಂಗ್ರೆಸ್ ಸೇರ್ಪಡೆಯಾದರೆ ಪ್ರಕಾಶ ಹುಕ್ಕೇರಿಗೆ ಅವಕಾಶ ಕೈ ತಪ್ಪಬಹುದು ಈ ಕಾರಣದಿಂದ ಸಿಟ್ಟಾಗಿರುವ ಪ್ರಕಾಶ ಹುಕ್ಕೇರಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿಲ್ಲ ಎನ್ನಲಾಗುತ್ತಿದೆ.

ಚಿಕ್ಕೋಡಿ ಕೈ ಪಾಳಯದಲ್ಲಿ ಅಸಮಧಾನ ಸ್ಪೋಟ

ಕೇಂದ್ರ ಸರಕಾರದ ಆರ್ಥಿಕ ಹಾಗೂ ಜನ ವಿರೋಧಿ ನೀತಿ ವಿರುದ್ಧ ನಡೆಸಿದ್ದ ಚಿಕ್ಕೋಡಿ ಪಟ್ಟಣದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ABOUT THE AUTHOR

...view details