ಕರ್ನಾಟಕ

karnataka

ETV Bharat / state

ಹಗ್ಗದಿಂದ ಎಳೆದು ಸೋಂಕಿತರ ಅಂತ್ಯಕ್ರಿಯೆ: ಆರೋಗ್ಯ ಸಿಬ್ಬಂದಿ ವಿರುದ್ಧ ಕುಟುಂಬಸ್ಥರ ಆಕ್ರೋಶ - ಅಗೌರವದಿಂದ ಕೊರೊನಾ ಸೋಂಕಿತರ ಅಂತ್ಯಕ್ರಿಯೆ

ಗೋಕಾಕ್​ ನಗರದಲ್ಲಿ ಕೊರೊನಾ ಸೋಂಕಿತರ ಮೃತದೇಹಗಳನ್ನು ಹಗ್ಗದಿಂದ ಎಳೆದು ತಂದು ಅಂತ್ಯ ಸಂಸ್ಕಾರ ಮಾಡುವ ಮೂಲಕ ಅಗೌರವ ತೋರಲಾಗಿದೆ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ.

Disrespectful funeral accustion in Gokak
ಅಗೌರವದಿಂದ ಕೊರೊನಾ ಸೋಂಕಿತರ ಅಂತ್ಯಕ್ರಿಯೆ

By

Published : Jul 31, 2020, 10:44 AM IST

ಬೆಳಗಾವಿ:ಕೊರೊನಾ ಸೋಂಕಿತರ ಅಂತ್ಯಕ್ರಿಯೆ ಗೌರವಯುತವಾಗಿ ನಡೆಸುವಂತೆ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿ ಒಂದು ದಿನ ಕಳೆಯುವುದರೊಳಗೆ ಅಗೌರವದಿಂದ ಅಂತ್ಯಕ್ರಿಯೆ ನಡೆಸಿದ ಮತ್ತೊಂದು ಆರೋಪ ಕೇಳಿ ಬಂದಿದೆ.

ಗೋಕಾಕ್​ ನಗರದಲ್ಲಿ ಈ ಘಟನೆ ನಡೆದಿದ್ದು, ಮೃತದೇಹಗಳನ್ನು ಹಗ್ಗದಿಂದ ಎಳೆದು ತಂದು ಅಂತ್ಯ ಸಂಸ್ಕಾರ ಮಾಡುವ ಮೂಲಕ ಅಗೌರವ ತೋರಲಾಗಿದೆ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ.

ಕೊರೊನಾ ಸೋಂಕಿತರ ಅಂತ್ಯಕ್ರಿಯೆ

ಕೊರೊನಾ ಸೋಂಕಿಗೆ ಬಲಿಯಾದ 92 ವರ್ಷದ ವೃದ್ಧ ಸೇರಿ ಇಬ್ಬರ ಅಂತ್ಯಕ್ರಿಯೆ ನಗರದ ರುದ್ರಭೂಮಿಯಲ್ಲಿ ನಡೆಸಲಾಯಿತು. ಈ ವೇಳೆ ಆರೋಗ್ಯ ಸಿಬ್ಬಂದಿ ಮೃತದೇಹಗಳನ್ನು ಹಗ್ಗದ ಸಹಾಯದಿಂದ ಗುಂಡಿಗೆ ಇಳಿಸಿದ್ದಾರೆ. ಇದಕ್ಕೆ ಮೃತರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಅಂತ್ಯ ಸಂಸ್ಕಾರದ ವೇಳೆ ತಮಗೆ ಪಿಪಿಇ ಕಿಟ್​ ನೀಡದೆ ತಾಲೂಕು ಆಡಳಿತ ಬೇಜವಾಬ್ದಾರಿ ತೋರಿದೆ ಎಂದು ದೂರಿದ್ದಾರೆ.

ABOUT THE AUTHOR

...view details