ಚಿಕ್ಕೋಡಿ :ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಇಂದು ಪ್ರವಾಹ ಸ್ಥಳಗಳಿಗೆ ಕಾಗವಾಡ ಅನರ್ಹ ಶಾಸಕ ಶ್ರೀಮಂತ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಪ್ರವಾಹ ಪೀಡಿತ ಸ್ಥಳಗಳಿಗೆ ಅನರ್ಹ ಶಾಸಕ ಶ್ರೀಮಂತ ಪಾಟೀಲ್ ಭೇಟಿ,ಪರಿಶೀಲನೆ.. - Disqualified MLA Shrimant patil
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಜುಗೂಳ ಮಂಗಾವತಿ ಗ್ರಾಮಗಳಿಗೆ ಕಾಗವಾಡ ಅನರ್ಹ ಶಾಸಕ ಶ್ರೀಮಂತ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸೂಕ್ತ ಪರಿಹಾರ ಕಲ್ಪಿಸುವ ಭರವಸೆ ನೀಡಿದರು.
![ಪ್ರವಾಹ ಪೀಡಿತ ಸ್ಥಳಗಳಿಗೆ ಅನರ್ಹ ಶಾಸಕ ಶ್ರೀಮಂತ ಪಾಟೀಲ್ ಭೇಟಿ,ಪರಿಶೀಲನೆ..](https://etvbharatimages.akamaized.net/etvbharat/prod-images/768-512-4050105-thumbnail-3x2-belgum.jpg)
MLA Shrimant patil ,ಶಾಸಕ ಶ್ರೀಮಂತ ಪಾಟೀಲ್
ಜಿಲ್ಲೆಯ ಪ್ರವಾಹ ಸ್ಥಳಗಳಿಗೆ ಅನರ್ಹ ಶಾಸಕ ಶ್ರೀಮಂತ ಪಾಟೀಲ್ ಭೇಟಿ, ಪರಿಶೀಲನೆ
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಜುಗೂಳ ಮಂಗಾವತಿ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕರು ಲೈಫ್ ಜಾಕೇಟ್ ಇಲ್ಲದೆ ತುಂಬಿ ಹರಿಯುವ ಕೃಷ್ಣಾ ನದಿಯಲ್ಲಿ ಪ್ರಯಾಣ ಮಾಡಿದರು. ಪ್ರವಾಹ ಪರಿಸ್ಥಿತಿ ಪರಿಶೀಲಿಸಿ ನಮ್ಮ ಸಕ್ಕರೆ ಕಾರ್ಖಾನೆ ವತಿಯಿಂದ ಪ್ರವಾಹ ಗ್ರಾಮಗಳಿಗೆ ಸೂಕ್ತ ಮೇವಿನ ವ್ಯವಸ್ಥೆ ಒದಗಿಸಲಾಗುವುದು ಎಂಬ ಭರವಸೆ ನೀಡಿದರು. ಅನರ್ಹ ಶಾಸಕರಿಗೆ ಸ್ಥಳೀಯ ತಾಪಂ, ಜಿಪಂ ಸದಸ್ಯರು ಹಾಗೂ ಗ್ರಾಮಸ್ಥರು ಸಾಥ್ ನೀಡಿದರು. ಕಾಗವಾಡ ತಾಲೂಕು ಕರ್ನಾಟಕದ ಕಟ್ಟ ಕಡೆಯ ಕನ್ನಡದ 2 ಹಳ್ಳಿಗಳನ್ನ ಹೊಂದಿದೆ. ಅತಿ ಹೆಚ್ಚಿನ ಪ್ರಮಾಣದಲ್ಲಿ ಈ ಎರಡು ಗ್ರಾಮಗಳಿಗೆ ಪ್ರವಾಹ ಬಂದಿದೆ.