ಕರ್ನಾಟಕ

karnataka

ETV Bharat / state

ಅನರ್ಹರು ಬಿಜೆಪಿಯ ಭಾಗ, ಬಿಜೆಪಿಯ ಟಿಕೆಟ್ ಫಿಕ್ಸ್.. ಡಾ.ಪ್ರಭಾಕರ ಕೋರೆ - ಮಧ್ಯಂತರ ಚುನಾವಣೆ

ತಂತಿ ಮೇಲೆ ನಡಿಗೆಯಾಗಿದೆ ಎಂಬ ಸಿಎಂ ಹೇಳಿಕೆಗೆ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯೆ ನೀಡಿದ ಡಾ.ಪ್ರಭಾಕರ ಕೋರೆ, ಯಾವುದೇ ವ್ಯಕ್ತಿ ಮುಖ್ಯಮಂತ್ರಿ ಹುದ್ದೆಗೇರಲು ಕಷ್ಟ ಅನುಭವಿಸಬೇಕು. ಹೀಗಾಗಿ ತೊಂದರೆಗಳಿದ್ದರೂ ಅದನ್ನು ಸರಿಪಡಿಸಿಕೊಂಡು ಸಿಎಂ ರಾಜ್ಯದ ಅಭಿವೃದ್ಧಿ ಮಾಡಬೇಕು ಎಂದು ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ್‌ ಕೋರೆ ಹೇಳಿದ್ದಾರೆ.

ಡಾ. ಪ್ರಭಾಕರ ಕೋರೆ

By

Published : Oct 2, 2019, 11:23 PM IST

ಬೆಳಗಾವಿ:ಸಿಎಂ ಯಡಿಯೂರಪ್ಪನವರಿಗೆ ಏನಾದರೂ ತೊಂದರೆಗಳಿದ್ದರೂ ಅದನ್ನು ಸರಿಪಡಿಸಿಕೊಂಡು ರಾಜ್ಯದ ಅಭಿವೃದ್ಧಿ ಮಾಡಬೇಕು ಎಂದು ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಹೇಳಿದ್ದಾರೆ.

ಬಿಜೆಪಿ ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ..

ತಂತಿ ಮೇಲೆ ನಡಿಗೆಯಾಗಿದೆ ಎಂಬ ಸಿಎಂ ಹೇಳಿಕೆಗೆ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯೆ ನೀಡಿದ ಡಾ.ಪ್ರಭಾಕರ ಕೋರೆ, ಯಾವುದೇ ವ್ಯಕ್ತಿ ಮುಖ್ಯಮಂತ್ರಿ ಹುದ್ದೆಗೇರಲು ಕಷ್ಟ ಅನುಭವಿಸಬೇಕು. ಹೀಗಾಗಿ ತೊಂದರೆಗಳಿದ್ದರೂ ಅದನ್ನು ಸರಿಪಡಿಸಿಕೊಂಡು ಸಿಎಂ ರಾಜ್ಯದ ಅಭಿವೃದ್ಧಿ ಮಾಡಬೇಕು ಎಂದರು.ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರುವುದಿಲ್ಲ. ಬಿಜೆಪಿ ಸರ್ಕಾರವೇ ಈ ಅವಧಿಯನ್ನು ಪೂರ್ಣಗೊಳಿಸಲಿದೆ. ಅನರ್ಹರಿಗೆ ಟಿಕೆಟ್ ನೀಡುವ ಬಗ್ಗೆ ಸಿಎಂ ಈಗಾಗಲೇ ಹೇಳಿಕೆ ನೀಡಿದ್ದಾರೆ. 15 ಜನ ರಾಜೀನಾಮೆ ನೀಡಿದ್ದಕ್ಕೆ ನಮ್ಮ ಸರ್ಕಾರ ರಚನೆ ಆಗಿದೆ. ನಮ್ಮ ಪಕ್ಷ ಸಿದ್ಧಾಂತ ಒಪ್ಪಿಕೊಂಡೆ ಅನರ್ಹರು ಬಿಜೆಪಿ ಕಡೆಗೆ ಒಲವು ತೋರಿದ್ದಾರೆ ಎಂದರು.

ಅನರ್ಹ ಶಾಸಕರು ಬಿಜೆಪಿಯ ಭಾಗವಾಗಿದ್ದು, ಅವರಿಗೆ ಉಪ ಚುನಾವಣೆಯಲ್ಲಿ ಟಿಕೆಟ್ ನೀಡವುದು ನಿಶ್ಚಿತ. ಬಿಜೆಪಿಯ ಮೂಲ ಕಾರ್ಯಕರ್ತರಿಗೆ ಬಿಜೆಪಿ ಹೈಕಮಾಂಡ್ ಮಾತನಾಡಿ ಸಮಾಧಾನ ಮಾಡಿದೆ. ಬಜೆಪಿಯಲ್ಲಿ ಬಣದ ರಾಜಕೀಯ ಇಲ್ಲ. ಸಚಿವ ಸ್ಥಾನ ಕೈತಪ್ಪಿದಕ್ಕೆ ಉಮೇಶ ಕತ್ತಿ ನಿರಾಶೆ ಆಗಿಲ್ಲ. ಯಾರು ಮಂತ್ರಿ ಆಗಬೇಕು ಎಂದು ಪಕ್ಷದ ನಾಯಕರೇ ತೀರ್ಮಾನ ಮಾಡುತ್ತಾರೆ ಎಂದರು.

ಸಚಿವ ಸ್ಥಾನ ಸಿಕ್ಕರೂ, ಸಿಗದಿದ್ದರೂ ನಾವು ಪಕ್ಷದ ಪರವಾಗಿ ಕೆಲಸ ಮಾಡಬೇಕು. ಯಡಿಯೂರಪ್ಪ ಅವರನ್ನು ಕೇವಲ ಲಿಂಗಾಯತ ಧರ್ಮಕ್ಕೆ ಸೀಮಿತಗೊಳಿಸಬಾರದು. ಅವರೊಬ್ಬ ಹೋರಾಟಗಾರ. ಎಲ್ಲರೂ ಸಮಾನವಾಗಿ ಕರೆದೊಯ್ಯುತ್ತಿರುವುದಕ್ಕೆ ಸಿಎಂ ಆಗಿದ್ದಾರೆ ಎಂದರು.

ABOUT THE AUTHOR

...view details