ಬೆಳಗಾವಿ:ಬೆಳಗಾವಿ ಜಿಲ್ಲಾ ಪೊಲೀಸರು ಈ ವರ್ಷ ಖದೀಮರಿಂದ ವಶಪಡಿಸಿಕೊಂಡ ಅಪಾರ ಪ್ರಮಾಣದ ಸ್ವತ್ತುಗಳ ಪ್ರದರ್ಶನ ನಡೆಸಿ ವಾರಸುದಾರರಿಗೆ ಒಪ್ಪಿಸಿದರು.
4.18 ಕೋಟಿ ರೂ ಮೌಲ್ಯದ 8.39 ಕೆಜಿ ಚಿನ್ನಾಭರಣ, 4.91 ಲಕ್ಷ ರೂ ಮೌಲ್ಯದ 7.23 ಕೆಜಿ ಬೆಳ್ಳಿಯ ಆಭರಣ, 1.24 ಕೋಟಿ ರೂ ಮೌಲ್ಯದ 250 ಮೋಟರ್ ಸೈಕಲ್ (ದ್ವಿಚಕ್ರ ವಾಹನ), 3.99 ಕೋಟಿ ಮೌಲ್ಯದ 24 ಮೋಟರ್ ವಾಹನಗಳು (ನಾಲ್ಕು ಚಕ್ರ ವಾಹನ), 59.62 ಲಕ್ಷ ರೂ ಮೌಲ್ಯದ ಮೊಬೈಲ್, 7.47 ಕೋಟಿ ನಗದು ಜಪ್ತಿ ಸೇರಿದಂತೆ ಒಟ್ಟು 17,54 ಕೋಟಿ ರೂ ಮೌಲ್ಯದ ಸ್ವತ್ತುಗಳನ್ನು ವಿವಿಧ ಪ್ರಕರಣಗಳಲ್ಲಿ ಜಪ್ತಿ ಮಾಡಿಕೊಳ್ಳಲಾಗಿತ್ತು. ಇಂದು ಪಿರ್ಯಾದುದಾರರು ಹಾಗೂ ವಾರಸುದಾರರನ್ನು ಕರೆದಿರುವ ಪೊಲೀಸರು ಅವರ ಸ್ವತ್ತುಗಳನ್ನು ಮರಳಿ ನೀಡಿದರು.